ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ಇಬ್ಬರಿಗಾಗಿ ಮುಂದುವರೆದ ಹುಡುಕಾಟ

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಐವರು ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತೆಪ್ಪದಲ್ಲಿ 7 ಜನರು ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

ಒಬ್ಬರು ಪಾರಾಗಿದ್ದು, ಮತ್ತೊಬ್ಬನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೂವರ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸಲಾಗಿದೆ.

ಸಚಿನ್ ಈಜಿ ದಡ ಸೇರಿದ್ದಾರೆ. ಫಾರೂಕ್ ಅಹಮ್ಮದ್ ನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕೊಲ್ಹಾರ ಪಟ್ಟಣದ ನಿವಾಸಿಗಳಾದ ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ ಮೃತ ದೇಹ ಪತ್ತೆಯಾಗಿದೆ. ಕೊಲ್ಹಾರ ನಿವಾಸಿಗಳಾದ ಮೆಹಬೂಬ್, ರಫೀಕ್ ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ ವೆಲ್ ಸಮೀಪ ಮಂಗಳವಾರ ಸಂಜೆ ಎಂಟರಿಂದ ಹತ್ತು ಜನ ಜೂಜಾಟದಲ್ಲಿ ತೊಡಗಿದ್ದು, ಈ ವೇಳೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ಬಂಧನ ಭೀತಿಯಿಂದ ಆತಂಕಗೊಂಡ ಕೆಲವರು ಸಮೀಪದಲ್ಲಿದ್ದ ತೆಪ್ಪ ಏರಿ ಕೃಷ್ಣಾ ನದಿ ದಾಟಲು ಮುಂದಾಗಿದ್ದಾರೆ. ಈ ವೇಳೆ ತೆಪ್ಪ ಮಗುಚಿ ದುರ್ಘಟನೆ ಸಂಭವಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read