ಸಂಜೆ 5:30ರೊಳಗೆ ರೇವಣ್ಣ ವಿಚಾರಣೆಗೆ ಹಾಜರಾಗಬೇಕು; ಇಲ್ಲದಿದ್ದರೆ ತನಿಖಾಧಿಕಾರಿಗಳಿಂದ ಕ್ರಮ; ಸಚಿವ ಕೃಷ್ಣ ಬೈರೇಗೌಡ

ರಾಯಚೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ, ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಹೆಚ್.ಡಿ.ರೇವಣ್ಣಗೆ ಎಸ್ ಐಟಿ ಮುಂದೆ ಹಾಜರಾಗಲು ಇಂದು ಸಂಜೆ 5:30ರ ಡೆಡ್ ಲೈನ್ ನೀಡಲಾಗಿದೆ.

ಈ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಇಂದು ಸಂಜೆ 5:30ರೊಳಗೆ ರೇವಣ್ಣ ವಿಚಾರಣೆಗೆ ಹಜರಾಗಬೇಕು. ಒಂದು ವೇಳೆ ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ತನಿಖಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಎಸ್ ಐಟಿ ರೇವಣ್ಣ ಅವರಿಗೆ ಎರಡು ಬಾರಿ ನೋಟೀಸ್ ನೀಡಿದೆ. ಇಂದು ಸಂಜೆ 5:30ರೊಳಗೆ ತನಿಖೆಗೆ ಹಾಜರಾಗಲು ಸಮಯ ನೀಡಿದೆ. ಆದರೂ ಹಾಜರಾಗದಿದ್ದಲ್ಲಿ ಖಂಡಿತವಾಗಿಯೂ ತನಿಖಾಧಿಕಾರಿಗಳು ಕಾನೂನು ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read