ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿ ದುರಂತ ಸಂಭವಿಸಿದೆ. ತಂದೆಯೊಬ್ಬ ಪುತ್ರನಿಗೆ ಈಜು ಕಲಿಸಲು ಹೋಗಿದ್ದ ವೇಳೆ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಾಜ್ಯದ ಗಡಿಭಾಗ ತಮಿಳುನಾಡಿನ ಸೂಳಗಿರಿ ಸಮೀಪದ ನಂಜಾಪುರ ಗ್ರಾಮದಲ್ಲಿ ನಡೆದಿದೆ.
ಕಟ್ಟಡ ಕಾರ್ಮಿಕ ಮುನಿರತ್ನ(32) ಮತ್ತು ಸಂತೋಷ್ ಕುಮಾರ್(11) ಮೃತಪಟ್ಟವರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಮುನಿರತ್ನ ಕುಟುಂಬದವರೊಂದಿಗೆ ಜಮೀನಿನ ಬಳಿ ಹೋಗಿದ್ದಾರೆ. ಈ ವೇಳೆ ಮದ್ಯಪಾನ ಮಾಡಿದ್ದ ಅವರು ಕೃಷಿ ಹೊಂಡದಲ್ಲಿ ಪುತ್ರನಿಗೆ ಈಜು ಕಲಿಸುವುದಾಗಿ ನೀರಿಗೆ ಇಳಿದಿದ್ದಾರೆ. ತಳಭಾಗದಲ್ಲಿದ್ದ ಕೆಸರಿನಲ್ಲಿ ಸಿಲುಕಿಕೊಂಡು ಇಬ್ಬರು ಮೃತಪಟ್ಟಿದ್ದಾರೆ. ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರಗೆ ತೆಗೆದು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.