ಉದ್ಯೋಗ ಆಕಾಂಕ್ಷಿಗಳಿಗೆ ಮುಖ್ಯ ಮಾಹಿತಿ: ಕನ್ನಡ ಭಾಷಾ ಪರೀಕ್ಷೆ ಪಾಸಾದವರು ಮತ್ತೆ ಪರೀಕ್ಷೆ ಬರೆಯಬೇಕಿಲ್ಲ

ಬೆಂಗಳೂರು: ಕರ್ನಾಟಕ ನಾಗರಿಕ ಸೇವಾ ನಿಯಮಗಳು 2021ರ ಅನ್ವಯ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪಾಸ್ ಆಗಿ ಪ್ರಮಾಣ ಪತ್ರ ಪಡೆದವರು ಮತ್ತೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ ಎಂದು ಆಯೋಗ ತಿಳಿಸಿದೆ.

ವಾಣಿಜ್ಯ ತೆರಿಗೆ ಪರಿವೀಕ್ಷಕರ 15 ಹುದ್ದೆಗಳ ನೇಮಕಾತಿಗೆ ಜನವರಿ 6ರಂದು ಕನ್ನಡ ಭಾಷಾ ಪರೀಕ್ಷೆ ನಿಗದಿಯಾಗಿದ್ದು, ಈಗಾಗಲೇ ಕನ್ನಡ ಭಾಷಾ ಪರೀಕ್ಷೆ ಬರೆದು ಪಾಸಾದವರು ಜನವರಿ 6ರ ಪರೀಕ್ಷೆಗೆ ಹಾಜರಾಗಬೇಕಾಗಿಲ್ಲ ಎಂದು ಹೇಳಲಾಗಿದೆ.

2022ರ ನವೆಂಬರ್ 29 ಮತ್ತು ನಂತರದಲ್ಲಿ ಪರೀಕ್ಷೆಗಳನ್ನು ಬರೆದು ಪಾಸಾದವರ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದು. ಜನವರಿ 7ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾದರೆ ಸಾಕು, ಪರೀಕ್ಷೆಯಲ್ಲಿ ಪಾರದರ್ಶಕತೆಗೆ ಅಭ್ಯರ್ಥಿಗಳಿಗೆ ಬೇರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.

ಜನವರಿ 6ರಂದು ಕನ್ನಡ ಭಾಷಾ ಪರೀಕ್ಷೆ, ಜನವರಿ 7ರಂದು ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ನಿಗದಿಯಾಗಿದೆ. ದೂರದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಅಭ್ಯರ್ಥಿಗಳು ಅನಾವಶ್ಯಕವಾಗಿ ಪ್ರಯಾಣಿಸಬೇಕಿದೆ. ಇದರಿಂದ ವ್ಯಾಸಾಂಗ, ವಾಸ್ತವ್ಯಕ್ಕೆ ತೊಂದರೆಯಾಗಿದೆ ಎನ್ನುವ ಆಕ್ಷೇಪ ಕೇಳಿ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read