KPSC ಯಿಂದ ಮುಖ್ಯ ಮಾಹಿತಿ: ಇಲಾಖಾ ಪರೀಕ್ಷೆ ದಿನಾಂಕ ಘೋಷಣೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ವಿವಿಧ ದಿನಾಂಕಗಳಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಿದೆ.

ಜೂನ್ 7ರಿಂದ 9ರ ವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಲಾಖಾ ಪರೀಕ್ಷೆ ನಡೆಯಲಿದೆ. ಜೂನ್ 11 ರಿಂದ 14, ಜೂನ್ 19 ರಿಂದ 23ರ ವರೆಗೆ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಜೂನ್ 24 ರಿಂದ 29 ರವರೆಗೆ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ.

ಈ ಪರೀಕ್ಷೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ http://kpsc.kar.nic.in ಹೋಂ ಪೇಜ್ ನಲ್ಲಿ ತೋರಿಸಲಾದ Dept exam 2004 First session Admission Ticket ಲಿಂಕ್ ಮೇಲೆ ಕ್ಲಿಕ್ ಮಾಡಿ ಅಭ್ಯರ್ಥಿ ತಮ್ಮ ಅರ್ಜಿ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಮೇ 30 ರಿಂದ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

KPSC, Dept., Exam, Admission Ticket, Website,  ಇಲಾಖಾ ಪರೀಕ್ಷೆ, ಅಭ್ಯರ್ಥಿಗಳು, ಜಿಲ್ಲಾ ಕೇಂದ್ರ, ಪ್ರವೇಶ ಪತ್ರ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read