ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಪದ್ದತಿಗೆ ತಿಲಾಂಜಲಿ; ಸಭಾಂಗಣದಲ್ಲಿ ಮಾಂಸದಡುಗೆ ಮಾಡಲು ʼಗ್ರೀನ್‌ ಸಿಗ್ನಲ್ʼ

ತಮಿಳುನಾಡಿನ ಉಪ್ಪಿಲಿಪಾಳ್ಯಂನಲ್ಲಿ‌ ಪೊಲೀಸ್‌ ಇಲಾಖೆಯಿಂದ ನಡೆಸುತ್ತಿರುವ ಸಮುದಾಯ ಭವನದಲ್ಲಿ ಮಾಂಸಾಹಾರಿ ಅಡುಗೆ ಮಾಡಬಾರದು ಎಂಬ ಅಲಿಖಿತ ನಿಯಮವನ್ನು ಕೊಯಮತ್ತೂರು ನಗರ ಪೊಲೀಸರು ತೆಗೆದುಹಾಕಿದ್ದು ತಾರತಮ್ಯ ಪದ್ಧತಿಯನ್ನು ನಿಲ್ಲಿಸುವಂತೆ ಪೊಲೀಸ್ ಆಯುಕ್ತ ವಿ ಬಾಲಕೃಷ್ಣನ್ ಆದೇಶ ನೀಡಿದ್ದಾರೆ.

ಕುಟುಂಬದ ಕಾರ್ಯಕ್ರಮಕ್ಕಾಗಿ ಸಭಾಂಗಣವನ್ನು ಕಾಯ್ದಿರಿಸಲು ಇತ್ತೀಚೆಗೆ ಕ್ರೈಸ್ತ ಕುಟುಂಬವೊಂದು ಸಭಾಂಗಣ ಉಸ್ತುವಾರಿಯನ್ನು ಸಂಪರ್ಕಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಅಡುಗೆ ಮನೆಯಲ್ಲಿ ಮಾಂಸಾಹಾರಿ ಖಾದ್ಯಗಳನ್ನು ತಯಾರಿಸಲು ಬಿಡುವುದಿಲ್ಲ ಎಂದು ಸಭಾಂಗಣದ ಆಡಳಿತಾಧಿಕಾರಿ ಸೂಚಿಸಿದ್ದರು.

ನಮ್ಮ ಕಾರ್ಯಕ್ರಮದಲ್ಲಿ ಮಾಂಸಹಾರಿ ಊಟವನ್ನೇ ತಯಾರಿಸಬೇಕೆಂದು ಕ್ರೈಸ್ತ ಕುಟುಂಬ ಹೇಳಿದಾಗ, ಹಾಗಾದರೆ ಹೊರಗಡೆ ಊಟ ತಯಾರಿಸಿ ಡೈನಿಂಗ್ ಹಾಲ್ ನಲ್ಲಿ ಊಟ ಬಡಿಸಿ. ಆದರೆ ಮಾಂಸಾಹಾರಿ ಆಹಾರವನ್ನು ನೀಡಲು ಸಭಾಂಗಣದಿಂದ ಯಾವುದೇ ಪಾತ್ರೆಗಳನ್ನು ಬಳಸಬಾರದು ಎಂದು ಕಟ್ಟುನಿಟ್ಟಾಗಿ ಆಡಳಿತಾಧಿಕಾರಿ ಹೇಳಿದರು. ಸಭಾಂಗಣವು ಸಾಕಷ್ಟು ಸೌಲಭ್ಯಗಳನ್ನು ಮತ್ತು ಸುಲಭ ಸಂಪರ್ಕವನ್ನು ಹೊಂದಿದ್ದರೂ ಆಹಾರದ ನಿರ್ಬಂಧದಿಂದಾಗಿ ನಾವು ಅಲ್ಲಿ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಂಸಾಹಾರಿಗಳನ್ನು ಕೀಳಾಗಿ ಕಾಣುವ ಮನೋಭಾವ ಬದಲಾಗಬೇಕು. ಆಹಾರ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಕೆಲಸ ಮಾಡಬೇಕಾದ ಪೊಲೀಸ್ ಇಲಾಖೆಯು ಇಂತಹ ಆಚರಣೆಗಳನ್ನು ಪ್ರೋತ್ಸಾಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಭಾಂಗಣ ಅಧಿಕಾರಿಗಳು 2011 ರಿಂದ ಈ ಕ್ರಮವನ್ನು ಅನುಸರಿಸುತ್ತಿದ್ದು ಇದನ್ನು ಕೊನೆಗೊಳಿಸಲು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ತಯಾರಿಸಲು ಎರಡು ಸೆಟ್ ಪಾತ್ರೆಗಳನ್ನು ಇಡಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read