BIG NEWS: ಲಂಚ ಪ್ರಕರಣ; ಕೋಟಾ ಮಾಜಿ SI ಸಸ್ಪೆಂಡ್

ಮಂಗಳೂರು: ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಾ ಪೊಲೀಸ್ ಠಾಣೆಯ ಮಾಜಿ ಎಸ್ ಐ ಓರ್ವರನ್ನು ಅಮಾನತುಗೊಳಿಸಿ ಎಸ್.ಪಿ ಡಾ.ಅರುಣ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಶಂಭುಲಿಂಗಯ್ಯ ಅಮಾನತುಗೊಂಡವರು. ಶಂಭುಲಿಂಗಯ್ಯ ಪ್ರಸ್ತುತ ಕಾರ್ಕಳದಲ್ಲಿ ಒಒಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಖಾಸಗಿ ಕಾಲೇಜೊಂದರ ಆಡಳಿತ ಮಂಡಳಿ ಸಮಸ್ಯೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಬಿ ರಿಪೋರ್ಟ್ ನೀಡಲು ಅಂದಿನ ಕೋಟಾ ಠಾಣಾಧಿಕಾರಿಯಾಗಿದ್ದ ಶಂಭುಲಿಂಗಯ್ಯ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು.

ಅಶಿಸ್ತಿನ ಕಾರಣಕ್ಕೆ ಶಂಭುಲಿಂಗಯ್ಯ ಅವರನ್ನು ಕೋಟಾದಿಂದ ಕಾರ್ಕಳಕ್ಕೆ ಒಒಡಿ ಮೇಲೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಪ್ರಕರಣ ಸಂಬಂಧ ಅಮಾನತುಮಾಡಿ ಆದೇಶ ಹೊರಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read