ಗ್ರಾಮ ಪಂಚಾಯಿತಿ 30 ಸಾವಿರ ಸಿಬ್ಬಂದಿಗೆ ಸರ್ಕಾರದಿಂದ ಬಿಗ್ ಶಾಕ್

ಬೆಂಗಳೂರು: ರಾಜ್ಯದ ಸುಮಾರು 6000 ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸಿ ಮತ್ತು ಡಿ ದರ್ಜೆ ನೌಕರರು ಎಂದು ಪರಿಗಣಿಸಿ ಸರ್ಕಾರಿ ನೌಕರರ ರೀತಿ ವೇತನ ನಿಗದಿ ಮಾಡುವುದು ಆಡಳಿತಾತ್ಮಕವಾಗಿ ಅಸಾಧ್ಯ ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ.

ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರು, ಗ್ರಾಮ ಪಂಚಾಯಿತಿ 30000 ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ವೇತನ ಪಾವತಿ ಸಮಸ್ಯೆ ನಿವಾರಣೆ, ವರ್ಗಾವಣೆ, ಕನಿಷ್ಠ ವಿದ್ಯಾರ್ಹತೆ ರದ್ದು ಮೊದಲಾದ ಬೇಡಿಕೆಗಳ ಈಡೇರಿಸುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿ, ಸೇವೆಯಲ್ಲಿ ಮರಣ ಹೊಂದಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ಅವಲಂಬಿತರಿಗೆ ಒಂದು ವರ್ಷದ ಸೇವೆಗೆ 15 ದಿನಗಳ ಪ್ರಕಾರ ಒಟ್ಟು 20 ತಿಂಗಳ ವೇತನ ಮೀರದಂತೆ ನಿವೃತ್ತಿ ಹಾಗೂ ಮರಣೋತ್ತರ ಉಪದಾನ ನೀಡಲಾಗುತ್ತಿದೆ. ಅಪಘಾತಗಳಾದಲ್ಲಿ ಅವಲಂಬಿತ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆ ಒದಗಿಸಲು ಜನ್ ಧನ್ ಯೋಜನೆಯಡಿ ವಿಮಾ ಪಾಲಿಸಿ ನೀಡಲಾಗುತ್ತಿದೆ. ಆಡಳಿತಾತ್ಮಕವಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸರ್ಕಾರಿ ನೌಕರರ ರೀತಿ  ವೇತನ ನಿಗದಿ ಮಾಡುವುದು ಅಸಾಧ್ಯವೆಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read