ಕೊರಿಯನ್ ವ್ಯಕ್ತಿಯ ಬಿಹಾರಿ ಉಚ್ಚಾರಣೆ ಕೇಳಿ ಬೆರಗಾದ ನೆಟ್ಟಿಗರು….!

ಈ ಕೊರಿಯನ್ ವ್ಯಕ್ತಿಯ ಹಿಂದಿ ಹಾಗೂ ಬಿಹಾರಿ ಉಚ್ಛಾರಣೆ ಕೇಳಿದ್ರೆ, ಬಹುಶಃ ಅವರು ಭಾರತವನ್ನು ಪ್ರೀತಿಸುತ್ತಿದ್ದಾರೆ ಎಂದು ತೋರುತ್ತದೆ. ಅಷ್ಟು ನಿರರ್ಗಳವಾಗಿ ಈ ಭಾಷೆಗಳನ್ನು ಅವರು ಮಾತನಾಡುತ್ತಾರೆ.

ಹೌದು, ಚಾರ್ಲಿ ಎಂಬ ಕೊರಿಯನ್ ಕಂಟೆಂಟ್ ಕ್ರಿಯೇಟರ್, ಪ್ರಶಾಂತ್ ಕುಮಾರ್ ಎಂಬ ಭಾರತೀಯ ಕಂಟೆಂಟ್ ಕ್ರಿಯೇಟರ್ ಜೊತೆಗೆ ಬಿಹಾರಿ ಉಚ್ಚಾರಣೆ ಜೊತೆಗೆ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವೈರಲ್ ವಿಡಿಯೋವನ್ನು ಆರಂಭದಲ್ಲಿ ಪ್ರಶಾಂತ್ ಕುಮಾರ್ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಚಾರ್ಲಿ ಬಿಹಾರದ ಪಾಟ್ನಾದ ಕೆಲವು ಸ್ಥಳಗಳನ್ನು ಅನ್ವೇಷಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ನಂತರ ಚಾರ್ಲಿ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ವ್ಲಾಗ್ ಅನ್ನು ಹಂಚಿಕೊಂಡರು. ಈ ವೇಳೆ 3 ವರ್ಷಗಳ ನಂತರ ಪಾಟ್ನಾಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡರು.

ವಿಡಿಯೋದಲ್ಲಿ, ಪ್ರಶಾಂತ್ ಮತ್ತು ಚಾರ್ಲಿ ಇಬ್ಬರೂ ಪಾಟ್ನಾದಲ್ಲಿ ಕೆಲವು ಮೋಜಿನ ಸವಾರಿಗಳನ್ನು ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇಲ್ಲಿಯವರೆಗೆ, ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ 76,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಚಾರ್ಲಿಯ ಹಿಂದಿ ಹಾಗೂ ಬಿಹಾರಿ ಉಚ್ಛಾರಣೆಗೆ ಫಿದಾ ಆಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read