ಕೊಪ್ಪಳ: ಕೌಟುಂಬಿಕ ಕಲಹಕ್ಕೆ ನೊಂದ ಮಹಿಳೆ 5 ವರ್ಷದ ಮಗಳ ಜೊತೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಯನಗರದಲ್ಲಿ ನಡೆದಿದೆ.
ಸುಮಂಗಲಾ ಮೃತ ಮಹಿಳೆ. 5 ವರ್ಷದ ಮಗಳ ಸ್ಥಿತಿ ಗಂಭೀರವಾಗಿದೆ. ಗಾಯಾಳು ಮಗುವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮಹಿಳೆ ಸುಮಂಗಲಾಗೆ ಪತಿ ಕಿರುಕುಳ ನೀಡುತ್ತಿದ್ದನಂತೆ. ಪತಿಯ ಹಿಂಸೆಗೆ ಮನನೊಂದ ಸುಮಂಗಲ, ಪುಟ್ಟ ಮಗಳೊಂದಿಗೆ ಸೇರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.