ಕೊಲ್ಕತ್ತಾ: ಕಾಳಿ ದೇವಸ್ಥಾನದಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ದೇವಾಲಯಕ್ಕೆ ನುಗ್ಗಿದ ಕಳ್ಳ, ಕದ್ದ ಸಾಮುನಗಳನ್ನೆಲ್ಲ ಬ್ಯಾಕ್ ನಲ್ಲಿ ತುಂಬಿಕೊಂಡು ಇನ್ನೇನಿ ದೇವಸ್ಥಾನದಿಂದ ಕಾಲ್ಕೀಳಬೇಕು ಎನ್ನುವಷ್ಟರಲ್ಲಿ ನಿದ್ದೆಗೆ ಜಾರಿದ ವಿಚಿತ್ರ ಘಟನೆ ಪಶ್ಚಿಮ ಬಂಗಾಳದ ಸಿಂಗ್ ಭೂಮ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ.
ವೀರ್ ನಾಯಕ್ ಎಂಬ ಕಳ್ಳ ತಡ ರಾತ್ರಿ ಕಾಳಿ ದೇವಸ್ಥಾನಕ್ಕೆ ಕಳ್ಳತನಕ್ಕಾಗಿ ನುಗ್ಗಿದ್ದಾನೆ. ದೇವಸ್ಥಾನದ ಹಿಂಬಾಗಿಲಿನ ಬೀಗ ಮುರಿದು ಒಳ ಪ್ರವೇಶ ಮಾಡಿದ್ದಾನೆ. ದೇವಸ್ಥಾನದ ಸಾಮಾನುಗಳನ್ನು ಕದ್ದು ಒಂದು ಕಡೆ ಕವರ್ ಬ್ಯಾಗ್ ಗಳಲ್ಲಿ ತುಂಬಿ ರಾಶಿ ಹಾಕಿದ್ದಾನೆ. ಬಳಿಕ ಅಲ್ಲಿಯೇ ಏಕಾಏಕಿ ನಿದ್ದೆಗೆ ಜಾರಿದ್ದಾನೆ. ಬೆಳಗಾದರೂ ಆತನಗಿ ಎಚ್ಚರವಾಗಿಲ.
ಬೆಳಿಗ್ಗೆ ದೇವಸ್ಥಾನಕ್ಕೆ ಭಕ್ತರು ಬಂದಾಗಲೇ ವಿಷಯ ಗೊತ್ತಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಲ್ಲಣನ್ನು ಎಚ್ಚರಗೊಳಿಸಿದ್ದಾರೆ. ಕದ್ದ ವಸ್ತುಗಳ ಸಮೇತ ವಶಕ್ಕೆ ಪಡೆದಿದ್ದಾರೆ.
ಕಳ್ಳತನಕ್ಕೂ ಮೊದಲು ವೀರ್ ನಾಯಕ್ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದ. ಬಳಿಕ ದೇವಸ್ಥಾನದ ಮುಂಭಾಗ ಗೋಡೆ ಹತ್ತಿ ಇಳಿದು ದೇವಸ್ಥಾನದ ಹಿಂಭಾಗದ ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾನೆ. ಬಳಿಕ ಕುಡಿದ ಮತ್ತಿನಲ್ಲಿ ಅಲ್ಲಿಯೇ ನಿದ್ದೆಗೆ ಜಾರಿದ್ದಾನೆ.