ಕೋಲ್ಕತ್ತಾ: ವಿದ್ಯುತ್ ಉಪಕರಣ ಸಂಗ್ರಹದ ಗೋಡೌನ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಕೋಲ್ಕತ್ತಾದ 26ನೇ ಎಜ್ರಾ ಸ್ಟ್ರೀಟ್ ಬಳಿ ನಡೆದಿದೆ.
ಗೋಡೌನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಸುತ್ತಮುತ್ತಲು ದಟ್ಟ ಹೊಗೆ ಆವರಿಸಿದೆ. ಘಟನಾ ಸ್ಥಳಕ್ಕೆ ೨೦ ಅಗ್ನಿಶಾಮಕಗಳು ದೊಯ್ಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.
ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
