ಕೊಲ್ಕತ್ತಾ ಮೆಟ್ರೋ ಬುಧವಾರ ದೇಶದಲ್ಲೇ ಮೊದಲ ಬಾರಿಗೆ ಐತಿಹಾಸಿಕ ದಾಖಲೆ ಮಾಡಿದೆ. ನದಿಯೊಳಗಿನ ಸುರಂಗದ ಮೂಲಕ ಮೆಟ್ರೋ ರೈಲು ಸಾಗಿ ಇತಿಹಾಸ ನಿರ್ಮಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳು ಮತ್ತು ಇಂಜಿನಿಯರ್ಗಳು ಮಾತ್ರ ಇದ್ದ ಮೆಟ್ರೋ, ಪ್ರಾಯೋಗಿಕ ಸಂಚಾರದಲ್ಲಿ ಹೂಗ್ಲಿ ನದಿಯಲ್ಲಿ ಕೋಲ್ಕತ್ತಾದಿಂದ ಹೌರಾಗೆ ಸಾಗಿತು.
ಕೋಲ್ಕತ್ತಾ ಮತ್ತು ಅದರ ಉಪನಗರಗಳ ಜನರಿಗೆ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ ಎಂದು ಅಧಿಕಾರಿ ಹೇಳಿದರು.
ಮೆಟ್ರೋ ರೈಲ್ವೆ ಜನರಲ್ ಮ್ಯಾನೇಜರ್ ಪಿ ಉದಯ್ ಕುಮಾರ್ ರೆಡ್ಡಿ ಮತ್ತು ಇತರ ಹಿರಿಯ ಅಧಿಕಾರಿಗಳು ಕೋಲ್ಕತ್ತಾದ ಮಹಾಕರನ್ ನಿಲ್ದಾಣದಿಂದ ಹೌರಾದ ಮೈದಾನ್ ನಿಲ್ದಾಣಕ್ಕೆ ಪ್ರಯಾಣಿಸಿದರು.
ಹೌರಾ-ಎಸ್ಪ್ಲಾನೇಡ್ ಸ್ಟ್ರೆಚ್ನಲ್ಲಿ ವಾಣಿಜ್ಯ ಸೇವೆಗಳು ಈ ವರ್ಷ ಪ್ರಾರಂಭವಾಗುವ ನಿರೀಕ್ಷೆಯಿದೆ.
https://twitter.com/metrorailwaykol/status/1646124044838932481?ref_src=twsrc%5Etfw%7Ctwcamp%5Etweetembed%7Ctwterm%5E1646124044838932481%7