ಸಾಂಪ್ರದಾಯಿಕ ಬೆಂಗಾಲಿ ವಿವಾಹದಲ್ಲಿ ಒಂದಾದ ಸಲಿಂಗಿ ಜೋಡಿ….!

ಕೋಲ್ಕತ್ತಾ ಮಹಾನಗರದಲ್ಲಿ ಸಲಿಂಗಿ ಜೋಡಿಯೊಂದು ಸಾಂಪ್ರದಾಯಿಕ ಸಮಾರಂಭವೊಂದರಲ್ಲಿ ಹಸೆಮಣೆ ಏರಿದ್ದು, ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಹೊಸ ಆಶಾಕಿರಣ ಮೂಡಿಸಿದೆ.

ಸಾಂಪ್ರದಾಯಿಕ ಬೆಂಗಾಲೀ ಸಮಾರಂಭವೊಂದರಲ್ಲಿ ಸಪ್ತಪದಿ ತುಳಿದ ಈ ಜೋಡಿ, ಅರಿಶಿನ ಶಾಸ್ತ್ರ, ಸಂಗೀತ, ಮೆಹಂದಿ ಹಾಗೂ ಫೇರಾಗಳಂಥ ಶಾಸ್ತ್ರಗಳನ್ನೂ ಪೂರೈಸಿದೆ.

ಮೌಸೊಮಿ ದತ್ತಾ ಹಾಗೂ ಮೌಮಿರಾ ಮಜುಮ್ದಾರ್‌ ತಮ್ಮ ಈ ಮದುವೆಯ ಮೂಲಕ ಸಮಾನ ಮನಸ್ಕರ ಬಳಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. 2018ರಲ್ಲಿ ಇದೇ ನಗರದಲ್ಲಿ ಸುಚಂದ್ರಾ ದಾಸ್ ಹಾಗೂ ಶ್ರೀ ಮುಖರ್ಜಿ ಎಂಬ ಸಲಿಂಗಿ ಜೋಡಿಗಳು ಮದುವೆಯಾಗುವ ಮೂಲಕ ಈ ಸಂಪ್ರದಾಯಕ್ಕೆ ಚಾಲನೆ ಕೊಟ್ಟಿದ್ದರು.

“ಪ್ರೇಮವೆಂದರೆ ಪ್ರೇಮವಷ್ಟೇ. ನೀವು ಪ್ರೇಮದಲ್ಲಿ ಬಿದ್ದಾಗ ಲಿಂಗದ ವಿಚಾರ ಅಷ್ಟಾಗಿ ಬರುವುದಿಲ್ಲ. ಅದೇನಿದ್ದರೂ ಸರಿಯಾದ ವ್ಯಕ್ತಿ ಹಾಗೂ ಹೃದಯದೊಂದಿಗೆ ಬೆಸುಗೆಯಷ್ಟೇ. ಪ್ರೇಮ ಎಲ್ಲರನ್ನೂ ಸೆಳೆಯುತ್ತದೆ,” ಎಂದು ಮೌಸೊಮಿ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read