ಕೋಲ್ಕತ್ತಾ ಮಾರುಕಟ್ಟೆಯಲ್ಲಿ ಕುಣಿದ ಯುವತಿ ನೃತ್ಯ ಸಖತ್ ವೈರಲ್

ಯುವಜನತೆ ಇತ್ತೀಚಿಗೆ ಸಾರ್ವಜನಿಕವಾಗಿ ನೃತ್ಯ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಕೊಲ್ಕತ್ತಾದಲ್ಲಿ ಯುವತಿಯೊಬ್ಬಳು ಸಾರ್ವಜನಿಕವಾಗಿ ಕುಣಿದಿದ್ದು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಯೀಸ್ ಚಿತ್ರದ ʼಲೈಲಾ ಮೇ ಲೈಲಾʼ ಹಾಡಿನ ಹುಕ್ ಸ್ಟೆಪ್‌ಗಳನ್ನು ಯುವತಿಯೊಬ್ಬರು ಹಾಕಿದ್ದಾರೆ. ಈ ವೈರಲ್ ಡ್ಯಾನ್ಸ್ ವೀಡಿಯೋದಲ್ಲಿ ಕೋಲ್ಕತ್ತಾದ ಹುಡುಗಿ ತನ್ನ ಲವಲವಿಕೆಯ ನೃತ್ಯವನ್ನು ಜನನಿಬಿಡ ಮಾರುಕಟ್ಟೆಯಲ್ಲಿ ಪ್ರದರ್ಶಿಸಿದ್ದಾಳೆ. ಆಕೆಯ ನೃತ್ಯ ಕೋಲ್ಕತ್ತಾದ ಮುಖ್ಯ ಮಾರುಕಟ್ಟೆಯ ಮುಂದೆ ನೆರೆದಿದ್ದ ಪ್ರೇಕ್ಷಕರನ್ನು ಆಕರ್ಷಿಸಿತು.

ಸಹೇಲಿ ರುದ್ರ ಅವರು ತಮ್ಮ ಈ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಡ್ಯಾನ್ಸ್ ವಿಡಿಯೋ ಕೆಲವೇ ಸಮಯದಲ್ಲಿ ವೈರಲ್ ಆಗಿದ್ದು, ತಕ್ಷಣ ಗಮನ ಸೆಳೆಯಿತು. ಅನೇಕ ಬಳಕೆದಾರರು ಆಕೆಯ ಶಕ್ತಿಯುತ ನೃತ್ಯವನ್ನು ಶ್ಲಾಘಿಸಿದರೆ, ಇತರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read