ಕೋಲಾರ: ಅಂತರಾಜ್ಯ ಖಾಸಗಿ ಬಸ್ ಗಳಿಗೆ ಆರ್ ಟಿ ಒ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಕೋಲಾರದಲ್ಲಿ 32 ಖಾಸಗಿ ಬಸ್ ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ತೆರಿಗೆ ವಂಚನೆ, ಸುರಕ್ಷತಾ ಸಾಧನಗಳ ಕೊರತೆ, ಎಫ್ ಸಿ ಇಲ್ಲದಿರುವುದು ಹಾಗೂ ತುರ್ತು ನಿರ್ಗಮನ ದ್ವಾರಗಳಿಲ್ಲದಿರುವಿಕೆ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆಗಳು ಪತ್ತೆಯಾಗಿವೆ. 32 ಬಸ್ ಗಳಿಂದ ಒಂದು ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆಂಧ್ರಪ್ರದೇಶ, ತಮಿಳುನಾಡು ಸೇರಿ ವಿವಿಧ ರಾಜ್ಯಗಳ ಖಾಸಗಿ ಟ್ರಾವಲ್ಸ್ ಬಸ್ ಗಳನ್ನು ಸೀಜ್ ಮಾಡಿದ್ದಾರೆ. ಜಂಟಿ ಸಾರಿಗೆ ಆಯುಕ್ತರಾದ ಗಾಯತ್ರಿದೇವಿ ನೇತೃತ್ವದಲ್ಲಿ 15 ಅಧಿಕಾರಿಗಳ ನಾಲ್ಕು ತಂಡ ನಿಯಮ ಉಲ್ಲಂಘನೆ ಮಾಡಿರುವ ಖಾಸಗಿ ಬದ್ಸ್ ಗಳನ್ನು ಸೀಜ್ ಮಾಡಿದೆ.
