ಹಾಡಹಗಲೇ ಹೋಟೆಲ್ ಗೆ ನುಗ್ಗಿ ಇಡ್ಲಿ ಬಾಕ್ಸನ್ನೇ ಕದ್ದೊಯ್ದ ಕಳ್ಳ…!

ಕೋಲಾರ: ಎಂತೆಂತಹ ಕಳ್ಳರಿರ್ತಾರೆ ನೋಡಿ… ಚಿನ್ನಾಭರಣ, ವಾಹನ, ಬೆಲೆ ಬಾಳುವ ವಸ್ತುಗಳು, ಟೊಮೆಟೊ, ದಾಳಿಂಬೆ ಕಳ್ಳತನವಾಯ್ತು ಈಗ ಇಡ್ಲಿ ಬಾಕ್ಸ್ ಸರದಿ… ಹೋಟೆಲ್ ಗೆ ನುಗ್ಗಿದ ಕಳ್ಳನೊಬ್ಬ ಹಾಡಹಗಲೇ ಇಡ್ಲಿ ಬಾಕ್ಸ್ ಕದ್ದೊಯ್ದ ಘಟನೆ ಕೋಲಾರದಲ್ಲಿ ನಡೆದಿದೆ.

ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಲಾರ ನಗರದ ಪುಲಿ ಇಡ್ಲಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.

ಹೋಟೆಲ್ ಮಾಲೀಕ ನವೀನ್ ಎಂಬುವವರು ಮಧ್ಯಾಹ್ನ ಮನೆಗೆ ಹೋಗಿ ಬರುವಷ್ಟರಲ್ಲಿ ಹೋಟೆಲ್ ನಲ್ಲಿ ಇದ್ದ ಇಡ್ಲಿ ಬಾಕ್ಸ್ ಮಾಯವಾಗಿದೆ. ಸಿಸಿ ಟಿವಿ ಪರಿಶೀಲಿಸಿದಾಗ ಕಳ್ಳನೊಬ್ಬ ಹೋಟೆಲ್ ಗೆ ನುಗ್ಗಿ ಇಡ್ಲಿ ಬಾಕ್ಸ್ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read