ಕೋಲಾರ: ಜಮೀನಿನಲ್ಲಿ ಉಳುಮೆ ಮಾಡಲೆಂದು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದ ಯುವಕನೊಬ್ಬ ಕೃಷಿಹೊಂಡದಲ್ಲಿ ಶವವಾಗಿ ಪಾತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಕೋಲಾರ ಜಿಲ್ಲೆಯ ಎಂ.ಮಲ್ಲಂಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಶ್ರೀಕಾಂತ್ (35) ಮೃತ ಯುವಕ. ಕೆಲ ದಿನಗಳಿಂದ ಕುಟುಂಬದಲ್ಲಿ ಜಮೀನು ವಿವಾದ ಆರಂಭವಾಗಿತ್ತು. ಗಲಾಟೆಯೂ ನಡೆದಿತ್ತು. ಇದೀಗ ಯುವಕ ಶ್ರೀಕಾಂತ್ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಶ್ರೀಕಾಂತ್ ನನ್ನು ಹತ್ಯೆ ಮಾಡಿರುವ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪದಿಸಿದ್ದಾರೆ. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.