‘ಕೊಹ್ಲಿ ಸಚಿನ್ ದಾಖಲೆ ಮುರೀತಾರೆ’ : 11 ವರ್ಷಗಳ ಹಿಂದೆ ಪೋಸ್ಟ್ ಹಾಕಿದ್ದ ಅಭಿಮಾನಿ ಈಗಿಲ್ಲ..!

ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 50ನೇ ಶತಕ ಬಾರಿಸಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.

ಇದರ ನಡುವೆ ‘ಕೊಹ್ಲಿ ಸಚಿನ್ ದಾಖಲೆ ಮುರೀತಾರೆ’ ಎಂದು 11 ವರ್ಷಗಳ ಹಿಂದೆ ಪೋಸ್ಟ್ ಹಾಕಿದ್ದ ಅಭಿಮಾನಿಯ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಹಳ ಬೇಜಾರಿನ ವಿಚಾರ ಅಂದರೆ ಆ ಪೋಸ್ಟ್ ಹಾಕಿದ್ದ ಅಭಿಮಾನಿ ಮೃತಪಟ್ಟಿದ್ದಾರೆ.

ಶಿಜು ಬಾಲನಂದನ್ ಎಂಬ ಯುವಕ 11 ವರ್ಷಗಳ ಹಿಂದೆ ಸಚಿನ್ ದಾಖಲೆ ವಿರಾಟ್ ಮುರೀತಾನೆ ಎಂದು ಪೋಸ್ಟ್ ಹಾಕಿದ್ದರು. ಹಲವರು ಇದಕ್ಕೆ ನಕ್ಕು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದರು. ಇದು ಸಾಧ್ಯವಿಲ್ಲ ಎನ್ನೋ ರೀತಿ ರಿಯಾಕ್ಟ್ ಮಾಡಿದ್ದರು.

ವಿರಾಟ್ ನ ಹುಚ್ಚು ಅಭಿಮಾನಿಯಾದ ಶಿಜು ವಿರಾಟ್ ಪ್ರತಿ ಶತಕ ಹೊಡೆದಾಗಲೂ ಅದೇ ಪೋಸ್ಟ್ ನಲ್ಲಿ + ಒಂದು ಅಂತ ಕಮೆಂಟ್ ಮಾಡುತ್ತಿದ್ದರು. ಆದರೆ ಐದು ವರ್ಷಗಳ ಹಿಂದೆ ಅವರು ಅಕಾಲಿಕ ಮರಣ ಹೊಂದುತ್ತಾರೆ. ಆದರೆ ಅವರ ಸ್ನೇಹಿತರ ಬಳಗದಲ್ಲಿದ್ದವರು ಆ ಪೋಸ್ಟ್ ಗೆ ವಿರಾಟ್ ಶತಕ ಹೊಡೆದಾಗಲೆಲ್ಲಾ + ಸೇರಿಸುತ್ತಾ ಹೋಗಿರುತ್ತಾರೆ. ಈಗ ವಿರಾಟ್ 50 ಶತಕ ಹೊಡೆದಿದ್ದು, ಇದನ್ನು ಸಂಭ್ರಮಿಸಲು ಅಭಿಮಾನಿ ಶಿಜು ಬಾಲನಂದನ್ ಇಲ್ಲ…ಈಗ ಶಿಜು ಇದ್ದಿದ್ರೆ ಅದೆಷ್ಟು ಖುಷಿ ಪಡ್ತಾ ಇದ್ರೋ?? ಸದ್ಯ ಶಿಜು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read