ನಿಜವಾಗಲಿದೆಯೇ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ…..?

ಬೆಂಗಳೂರು: ಹಾಸನ ಜಿಲ್ಲೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕೋಡಿಮಠದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಲಿದೆಯೇ? ಎಂಬ ಪ್ರಶ್ನೆ ಮೂಡಿದೆ.

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಇದನ್ನು ಗಮನಿಸಿದರೆ ಕೋಡಿಮಠದ ಶ್ರೀಗಳ ಭವಿಷ್ಯ ನಿಜವಾಗುವುದೇ? ಎಂಬ ಆತಂಕ ಮನೆಮಾಡಿದೆ.

ಭೂಪಟದಿಂದಲೇ ಒಂದು ದೇಶ ಕಣ್ಮರೆಯಾಗಲಿದೆ. ಭೂಕಂಪ, ಯುದ್ಧ, ಬಾಂಬ್ ದಾಳಿಗಳು ಹೆಚ್ಚಾಗಲಿವೆ ಎಂದು ಎರಡು ತಿಂಗಳ ಹಿಂದೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಜನರು ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಿದ್ದಾರೆ. ಸಾವು-ನೋವುಗಳು ಹೆಚ್ಚಾಗಲಿವೆ ಎಂದು ಹೇಳಿದ್ದರು. ಈಗ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಯುದ್ಧದ ಭೀಕರತೆ ನೋಡಿದರೆ ಕೋಡಿ ಶ್ರೀಗಳ ಭವಿಷ್ಯ ನಿಜವಾಗುತ್ತಾ ಎಂಬ ಆತಂಕ ಎದುರಾಗಿದೆ.

ಅಲ್ಲದೇ ಪ್ರಕೃತಿ ವಿಕೋಪ, ಭೀಕರ ಭೂಕಂಪ, ಯುದ್ಧ ಇಂತಹ ಅನಾಹುತ, ಸಾವು-ನೋವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ದೈವಿಕಾರ್ಯಗಳು, ದೇವರ ಆರಾಧನೆಯಂತಹ ಕೆಲಸಗಳಿಂದ ಅನಾಹುತಗಳಿಂದ ಪಾರಾಗಬಹುದಾಗಿದೆ ಎಂದು ಕೂಡ ಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read