ಕೊಡಗು: ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡಿದವರ ವಿರುದ್ಧ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿವೆ. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ 48 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಆಯೋಜನೆ ಮಾಡಿದ್ದ ಒಟ್ಟು 16 ಮಂಟಪಗಳ ವಿರುದ್ಧ ಕೇಸ ದಾಖಲಾಗಿದೆ. ವಿರಾಜಪೇಟೆಯಲ್ಲಿ ಶನಿವಾರ ರಾತ್ರಿ ವಿವಿಧೆಡೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಬಳಕೆ ಮಾಡಲಾಗಿತ್ತು.
ಒಟ್ಟು 16 ಮಂಟಪಗಳ ವಿರುದ್ಧ ಕೇಸ್ ದಾಖಲಾಗಿದ್ದು, ಡಿಜೆ ಆಪರೇಟರ್ ಸೇರಿ 48 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.