ಮನೆಯಲ್ಲಿ ʼಶಿವಲಿಂಗʼ ಸ್ಥಾಪನೆ ಮಾಡುವ ಮೊದಲು ತಿಳಿದಿರಲಿ ಈ ನಿಯಮ

ಮನೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಮಾಡುವ ಬದಲು ಶಿವಲಿಂಗ ಸ್ಥಾಪನೆ ಮಾಡುವುದಾದ್ರೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕು. ಪಂಡಿತರ ಪ್ರಕಾರ ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವ ಮೊದಲು ನಿಯಮ ಪಾಲಿಸುವುದು ಬಹಳ ಮುಖ್ಯ.

ಶಿವಲಿಂಗದ ಸ್ಥಾಪನೆಯನ್ನು ಎಂದೂ ತುಳಸಿ ಜೊತೆ ಮಾಡಬೇಡಿ. ತುಳಸಿ ಜೊತೆ ಕೇವಲ ಸಾಲಿಗ್ರಾಮವನ್ನು ಮಾತ್ರ ಸ್ಥಾಪನೆ ಮಾಡಬೇಕು. ಮರೆತೂ ತುಳಸಿ ಜೊತೆ ಶಿವಲಿಂಗವನ್ನು ಇಡಬೇಡಿ.

ಶಿವಲಿಂಗವನ್ನು ಎಂದೂ ಮುಚ್ಚಿರುವ ಜಾಗದಲ್ಲಿ ಮಾಡಬೇಡಿ. ರೂಮಿನೊಳಗೆ ದೇವರ ಮನೆಯಿದ್ದರೆ ಅಲ್ಲಿ ಶಿವಲಿಂಗ ಸ್ಥಾಪನೆ ಮಾಡಬೇಡಿ. ಕೇವಲ ತೆರೆದ ಸ್ಥಳಗಳಲ್ಲಿ ಮಾತ್ರ ಶಿವಲಿಂಗವನ್ನು ಸ್ಥಾಪಿಸಿ.

ಶಿವನಿಗೆ ಶುಚಿತ್ವ ಬಹಳ ಇಷ್ಟ. ಶಾಂತವಾಗಿ ಆತನ ಧ್ಯಾನ ಮಾಡಿದ್ರೆ ಶಿವ ಬೇಗ ಕೃಪೆ ತೋರುತ್ತಾನೆಂಬ ನಂಬಿಕೆಯಿದೆ. ಹಾಗಾಗಿ ಶಿವನಿಗೆ ಪೂಜೆ ಮಾಡಲು ಸಾಧ್ಯವಾಗದ ಸ್ಥಳದಲ್ಲಿ ಎಂದೂ ಶಿವಲಿಂಗ ಸ್ಥಾಪನೆ ಮಾಡಬೇಡಿ. ಶಿವಲಿಂಗಕ್ಕೆ ಸರಿಯಾಗಿ ಪೂಜೆ ಮಾಡುವ ಸ್ಥಳದಲ್ಲಿ ಮಾತ್ರ ಸ್ಥಾಪನೆ ಮಾಡಿ.

ಶಿವಲಿಂಗ ಸ್ಥಾಪನೆ ಮಾಡುವಾಗ ಗಾತ್ರದ ಬಗ್ಗೆ ಗಮನವಿರಲಿ. ದೊಡ್ಡ ಗಾತ್ರದ ಶಿವಲಿಂಗವನ್ನು ಎಂದೂ ಸ್ಥಾಪನೆ ಮಾಡಬೇಡಿ.

ಶಿವಲಿಂಗವೊಂದನ್ನೇ ಎಂದೂ ಸ್ಥಾಪನೆ ಮಾಡಬೇಡಿ. ಅದ್ರ ಜೊತೆ ಗಣೇಶ ಹಾಗೂ ಗೌರಿಯನ್ನೂ ಸ್ಥಾಪನೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read