Smartphone Tips: ಸ್ಮಾರ್ಟ್ಫೋನ್ ಗೆ ʼಸ್ಕ್ರೀನ್ ಗಾರ್ಡ್ʼ ಹಾಕುವ ಮುನ್ನ ನಿಮಗಿದು ತಿಳಿದಿರಲಿ

ನಿತ್ಯ ಜೀವನದ ಅತ್ಯಗತ್ಯ ವಸ್ತುಗಳಲ್ಲಿ ಫೋನ್‌ ಸೇರಿದೆ. ಫೋನ್‌ ಇಲ್ಲದೆ ಸ್ವಲ್ಪ ಸಮಯ ಇರೋದು ನಮಗೆ ಕಷ್ಟ. ಹಾಗಿರುವಾಗ ಫೋನ್‌ ಸುರಕ್ಷತೆ ಬಗ್ಗೆಯೂ ನಾವು ಗಮನ ಹರಿಸಬೇಕು. ಸಾವಿರ, ಲಕ್ಷ ಕೊಟ್ಟು ಫೋನ್‌ ಖರೀದಿ ಮಾಡುವವರಿದ್ದಾರೆ. ದುಬಾರಿ ಫೋನ್‌ ಗಳನ್ನು ನಾವು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಇಡಲು ಸಾಧ್ಯವಿಲ್ಲ. ಹಾಗೆಯೇ ಅದು ಕ್ಲೀನ್‌ ಆಗಿರಲು, ನಮ್ಮ ಬಳಕೆಗೆ ಆರಾಮದಾಯಕವಾಗಿರಲು ನಾವು ಸ್ಕ್ರೀನ್‌ ಗಾರ್ಡ್‌ ಬಗ್ಗೆಯೂ ಗಮನ ಹರಿಸಬೇಕು.

ಸ್ಕ್ರೀನ್ ಗಾರ್ಡ್ ಸ್ಕ್ರಾಚ್ ವಿರೋಧಿಯಾಗಿರಬೇಕು : ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದರೆ ಫೋನ್ ಪರದೆಯನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸಲು ಮತ್ತು ಗೀರುಗಳಿಂದ ರಕ್ಷಿಸಲು ಒಳ್ಳೆಯ ಸ್ಕ್ರೀನ್ ಗಾರ್ಡ್  ಬಳಸಿ. ಫೋನ್ ಸ್ಕ್ರೀನ್‌ ಮೇಲೆ ಗೀರುಗಳು ಬೀಳದಂತೆ, ಅದಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ.

ಫೋನ್‌ ಬಳಕೆ ಸುಲಭವಾಗಿರಲಿ : ನೀವು ಸ್ಕ್ರೀನ್‌ ಗಾರ್ಡ್‌ ಖರೀದಿ ವೇಳೆ ಅದು ಬಳಕೆಗೆ ಅನುಕೂಲವಾಗಿದೆಯೇ ಎಂಬುದನ್ನು ನೋಡಿ. ನಿಮ್ಮ ಫೋನ್‌ ಸ್ಕ್ರೀನ್‌ ಮೇಲೆ ಸ್ಕ್ರೀನ್‌ ಗಾರ್ಡ್‌ ಹಾಕಿದ ನಂತ್ರ ನಿಮ್ಮ ಬಳಕೆಗೆ ಅದು ಅನುಕೂಲವಾಗಿರಬೇಕು. ಟಚ್‌ ಸ್ಕ್ರೀನ್‌ ಗೆ ತೊಂದರೆಯಾಗಬಾರದು.

ಗಾತ್ರ :  ಆನ್ಲೈನ್‌ ನಲ್ಲಿ ಸ್ಕ್ರೀನ್‌ ಗಾರ್ಡ್‌ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವು ಹೀಗೆ ಖರೀದಿ ಮಾಡುವವರಾಗಿದ್ದರೆ ಸರಿಯಾದ ಗಾತ್ರದ ಸ್ಕ್ರೀನ್‌ ಗಾರ್ಡ್‌ ಖರೀದಿ ಮಾಡಿ. ದೊಡ್ಡ ಅಥವಾ ಚಿಕ್ಕ ಗಾತ್ರ ನಿಮ್ಮ ಫೋನ್‌ ಹಾಳು ಮಾಡುತ್ತದೆ.

ಫಿಂಗರ್ಪ್ರಿಂಟ್, ಎಣ್ಣೆ ಮುಕ್ತ : ನಾವು ಎಲ್ಲ ಸಮಯದಲ್ಲೂ ಸ್ಮಾರ್ಟ್ಫೋನ್‌ ಬಳಕೆ ಮಾಡ್ತೇವೆ. ಅನೇಕ ಬಾರಿ ನಮ್ಮ ಕೈ ಎಣ್ಣೆಯಾಗಿರಬಹುದು. ಆ ಸಮಯದಲ್ಲಿ ಸ್ಕ್ರೀನ್‌ ಮುಟ್ಟಿದ್ರೂ ಫೋನ್‌ ಗೆ ಹಾನಿಯಾಗಬಾರದು, ಫಿಂಗರ್ಪ್ರಿಂಟ್‌ ಬೀಳಬಾರದು ಅಂತ ಸ್ಕ್ರೀನ್‌ ಗಾರ್ಡ್‌ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read