ತಿಳಿಯಿರಿ ಸೌತಡ್ಕ ಕ್ಷೇತ್ರದ ವಿಶೇಷತೆ

ನಮ್ಮಲ್ಲಿ ಸಾಕಷ್ಟು ಸಂಖ್ಯೆಯ ಗಣಪತಿ ದೇವಾಲಯಗಳಿವೆ. ಆದರೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂಪೂರ್ಣ ವಿಭಿನ್ನ. ಇದೊಂದು ಪವಿತ್ರ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಹೌದು.

ಈ ದೇವಸ್ಥಾನದ ವಿಶೇಷತೆ ಎಂದರೆ ಉಳಿದೆಲ್ಲ ದೇವಸ್ಥಾನಗಳಂತೆ ಇಲ್ಲಿ ದೇಗುಲಕ್ಕೆ ಪ್ರತ್ಯೇಕ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿ ಕುಳಿತ ಗಣಪತಿ ಭಕ್ತರ ಬೇಡಿಕೆಗಳನ್ನು ಪೂರೈಸುತ್ತಾನೆ.

ಈ ಸ್ಥಳಕ್ಕೆ ಬಂದು ಹರಕೆ ಹೊತ್ತು ಗಣಪನಲ್ಲಿ ಪ್ರಾರ್ಥಿಸಿದರೆ ೨ ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಭಕ್ತರದ್ದು. ಅಲ್ಲಿಗೆ ಬರುವವರೆಲ್ಲಾ ಕ್ಷೇತ್ರದಲ್ಲಿ ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳು ನೇತಾಡುವುದನ್ನು ಕಾಣಬಹುದು.

ವಿದ್ಯೆ ಒದಗಿಸುವ, ಸಂತಾನ ಭಾಗ್ಯ ನೀಡುವ ಗಣಪ ಅಪಾರ ಭಕ್ತ ಸಾಗರವನ್ನೇ ಗಳಿಸಿಕೊಂಡಿದ್ದಾನೆ. ಕಜ್ಜಾಯ, ಪಂಚಕಜ್ಜಾಯ, ರಂಗಪೂಜೆ, ಮೂಡಪ್ಪ ಸೇವೆ ಈ ಕ್ಷೇತ್ರದಲ್ಲಿ ನಡೆಯುವ ಸರಳ ಸೇವೆಗಳು. ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದ ಗಣಪ ವರ್ಷಪೂರ್ತಿ ಭಕ್ತರಿಗೆ ಅಭಯ ನೀಡುತ್ತಾ ಬಂದಿದ್ದಾನೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read