ಅರಿಯಿರಿ ʼಕಿಸ್ʼನಲ್ಲಿರುವ ಗುಟ್ಟು……!

ದಂಪತಿಗಳ ನಡುವೆ ಜಗಳವಾಗಿದೆಯೇ? ನಿಮ್ಮ ನಡುವಿನ ಸಂಬಂಧವನ್ನು ಹೇಗೆ ಸರಿಪಡಿಸುವುದು ಎಂಬ ಚಿಂತೆ ಬಿಡಿ. ಒಂದು ಆತ್ಮೀಯ ಅಪ್ಪುಗೆ ಹಾಗೂ ಒಂದು ಕಿಸ್ ನಿಮ್ಮ ಸಂಬಂಧವನ್ನು ಒಂದು ಮಾಡಿ ಬಿಡುತ್ತದೆ ಎಂಬುದು ನಿಮಗೆ ತಿಳಿದಿರಲಿ.

ಅದೇ ರೀತಿ ಒಂದೊಂದು ಕಿಸ್ ಗೆ ಒಂದೊಂದು ಅರ್ಥವಿದೆ. ನಿಮ್ಮ ಸಂಗಾತಿಯ ಮೂಡ್ ಅನ್ನು ತಿಳಿದುಕೊಳ್ಳಲು ಕಿಸ್ ಕೂಡಾ ನಿಮಗೆ ನೆರವಾಗುತ್ತದೆ. ಹಣೆ ಮೇಲೆ ಕಿಸ್ ಕೊಟ್ಟರೆ ಅದು ಸಂಗಾತಿ ಕಂಫರ್ಟ್ ಆಗಿರುವುದನ್ನು ಸೂಚಿಸುತ್ತದೆ. ನಿಮ್ಮ ಮೇಲೆ ಅವರಿಗೆ ಗೌರವ ಹಾಗೂ ಪ್ರೀತಿ ಇದೆ ಎಂಬುದನ್ನು ಅದು ಸೂಚಿಸುತ್ತದೆ.

ಕೆನ್ನೆ ಮೇಲೆ ಕಿಸ್ ಕೊಟ್ಟರೆ ಅದು ಇಷ್ಟಪಡುವುದರ ಸಂಕೇತ. ಅದು ಫ್ರೆಂಡ್ ಶಿಪ್ ಅಥವಾ ಆಕರ್ಷಣೆಯನ್ನು ಸೂಚಿಸುತ್ತದೆ. ಕೆಲವೊಮ್ಮೆ ಇದರಲ್ಲಿ ರೊಮ್ಯಾಂಟಿಕ್ ಫೀಲ್ ಕೂಡಾ ಇರಬಹುದು.

ಕಿವಿಯ ಮೇಲೆ ಕಿಸ್ ಕೊಡುವುದು ಸಂಗಾತಿಯನ್ನು ಪ್ರಚೋದಿಸುವ ಪ್ರಕ್ರಿಯೆಯೂ ಆಗಿರಬಹುದು. ರೊಮ್ಯಾನ್ಸ್ ಗೆ ಸೂಚನೆ ಕೊಡುವುದೂ ಆಗಿರಬಹುದು. ಫ್ರೆಂಚ್ ಕಿಸ್ ರೊಮ್ಯಾಂಟಿಕ್ ಪ್ರಕ್ರಿಯೆಯ ಒಂದು ಭಾಗವೇ ಆಗಿರಬಹುದು. ಹಾಗಿದ್ದರೆ ನಿಮ್ಮ ಸಂಗಾತಿ ನಿಮಗ್ಯಾವ ರೀತಿಯಲ್ಲಿ ಕಿಸ್ ಕೊಡುತ್ತಿದ್ದಾರೆ ಎಂಬುದನ್ನು ಇಂದೇ ತಿಳಿದುಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read