ಇಂದಿನಿಂದ ಗಣಪತಿ ಹಬ್ಬದವರೆಗೆ ಕೆಎಂಎಫ್ ನಂದಿನಿ ಸಿಹಿ ಉತ್ಸವ: ಶೇ. 20ರಷ್ಟು ರಿಯಾಯಿತಿ

ಬೆಂಗಳೂರು: ಸ್ವಾತಂತ್ರ್ಯ ದಿನದಿಂದ ಗಣೇಶ ಹಬ್ಬದವರೆಗೆ ಕೆಎಂಎಫ್ ನಂದಿನಿ ಸಿಹಿ ಉತ್ಸವ ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ಗ್ರಾಹಕರಿಗೆ ಎಲ್ಲಾ ಶ್ರೇಣಿಯ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ. 20ರಷ್ಟು ನೇರ ರಿಯಾಯಿತಿ ನೀಡಲಾಗುವುದು.

ಆಗಸ್ಟ್ 15 ರಿಂದ ಸೆಪ್ಟಂಬರ್ 20ರವರೆಗೆ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದ್ದಾರೆ. ಬೆಲ್ಲದ ಪೇಡ, ಸ್ಪೆಷಲ್ ಹಾಲಿನ ಬರ್ಫಿ, ಚಾಕೊಲೇಟ್ ಕುಕೀಸ್, ಕಡಲೆ ಬೀಜ, ಬೆಲ್ಲದ ವಿಶೇಷ ನಂದಿನಿ ಕೋವಾ ಸೇರಿ ತಯಾರಿಸಲಾದ ಕೋವಾ ಕಡಲೆ ಮಿಠಾಯಿ ಲೋಕಾರ್ಪಣೆ ಮಾಡಲಾಗಿದೆ.

ಹಾಲಿನ ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಡ್ರೈ ಫ್ರೂಟ್ಸ್, ಮೈಸೂರು ಪಾಕ್, ಚಾಕೊಲೇಟ್ ಬರ್ಫಿಗಳು, ಕುಂದಾ, ಜಾಮೂನು, ರಸಗುಲ್ಲ, ಸಿರಿಧಾನ್ಯ ಹಾಲಿನ ಪುಡಿ ಮೊದಲಾದವು ಶೇಕಡ 20ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಬೆಲ್ಲದ ಪೇಡ ರಿಯಾಯಿತಿಯಲ್ಲಿ 100 ರೂ., ನಂದಿನಿ ಸ್ಪೆಷಲ್ ಹಾಲಿನ ಬರ್ಫಿ 88 ರೂ.ಗಳಿಗೆ ಸಿಗಲಿದೆ ಎಂದು ಹೇಳಲಾಗಿದೆ.

https://twitter.com/CMofKarnataka/status/1691113410858192896

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read