BREAKING: ಶ್ರೇಯಸ್ ಅಯ್ಯರ್, KL ರಾಹುಲ್ ಭರ್ಜರಿ ಶತಕ: ಭಾರತ 410/4

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ.

ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ರೋಹಿತ್ ಶರ್ಮ 61, ಶುಭಮನ್ ಗಿಲ್ 51, ವಿರಾಟ್ ಕೊಹ್ಲಿ 51, ಶ್ರೇಯಸ್ ಅಯ್ಯರ್ ಅಜೇಯ 128, ಕೆ.ಎಲ್. ರಾಹುಲ್ 102, ಸೂರ್ಯಕುಮಾರ್ ಯಾದವ್ ಅಜೇಯ 2 ರನ್ ಗಳಿಸಿದ್ದಾರೆ.

ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 64 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ನೆರವಿನಿಂದ 102 ರನ್ ಗಳಿಸಿದರು. ಶ್ರೇಯಸ್ 94 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಿತ 128 ರನ್ ಗಳಿಸಿದರು.

ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡ್ 2, ಆರ್.ವಿ. ಡೆರ್ ಮೆರ್ವೆ 1, ಪಾಲ್ ವಾನ್ ಮಿಕರೇನ್ 1 ವಿಕೆಟ್ ಪಡೆದರು.

ಭಾರತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದ್ದು, ನೆದರ್ಲೆಂಡ್ಸ್ ಗೆ 411 ಗೆಲುವಿನ ಗುರಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read