ರೈತರಿಗೆ ಗುಡ್ ನ್ಯೂಸ್: ಅಕ್ರಮ -ಸಕ್ರಮ ಅರ್ಜಿಗಳ ವಿಲೇವಾರಿ

ಚಾಮರಾಜನಗರ: ರೈತರ ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಬೇರೆ ಕಡೆಯಿಂದ ವಿದ್ಯುತ್ ಖರೀದಿಸಿ ರೈತರಿಗೆ ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ವಿದ್ಯುತ್ ಕಳವು ತಪ್ಪಿಸಲು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಯಾರೋ ವಿದ್ಯುತ್ ಕಳ್ಳತನ ಮಾಡಿ ರೈತರ ಮೇಲೆ ಹಾಕುತ್ತಿದ್ದು, ಆಧಾರ್ ಜೋಡಣೆಯಿಂದ ಅದು ತಪ್ಪಲಿದೆ. ಇಂಧನ ಇಲಾಖೆಗೂ ಲೆಕ್ಕ ಸಿಗಲಿದೆ ಎಂದು ಹೇಳಿದ್ದಾರೆ.

ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮದಡಿ 4 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದು, ಅವುಗಳೆಲ್ಲ ಕಡಿಮೆಯಾಗಿದೆ. ವಿದ್ಯುತ್ ಲೈನ್ ನಿಂದ 500 ಮೀಟರ್ ಒಳಗೆ ಇರುವ ಕೃಷಿ ಪಂಪ್ಸೆಟ್ ಗಳ ಸಕ್ರಮಕ್ಕೆ ಕ್ರಮ ವಹಿಸಲಾಗುವುದು. 500 ಮೀ.ಗಿಂತ ದೂರ ಇರುವ ಕೃಷಿ ಪಂಪ್ ಸೆಟ್ ಗಳಿಗೆ ಕುಸುಮ್ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗುವುದು.

ಅಕ್ರಮ ಸಕ್ರಮ ಯೋಜನೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ಆದ್ಯತೆ ಮೇರೆಗೆ 1,500 ಅರ್ಜಿಗಳನ್ನು ತೆಗೆದುಕೊಳ್ಳಲಿದ್ದು, ಎರಡು ವರ್ಷದೊಳಗೆ ಬಾಕಿ ಎಲ್ಲಾ ಅರ್ಜಿಗಳನ್ನು ಪೂರ್ಣಗೊಳಿಸಲಾಗುವುದು. ಕುಸುಮ್ ಯೋಜನೆಯಡಿ ಶೇ. 80ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read