ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗೆ ಎಐ ಬಳಕೆ: 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ಮುಂದುವರಿಕೆ

ಬೆಂಗಳೂರು: ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ ಮಾಡಲು ಇಂಧನ ಇಲಾಖೆ ಮುಂದಾಗಿದೆ.

ಕೃಷಿ ಬೆಳೆಗಳಿಗೆ ಅಗತ್ಯತೆ ಪ್ರದೇಶವಾರು ಅನುಗುಣವಾಗಿ ವಿದ್ಯುತ್ ಪೂರೈಕೆ ನಿರ್ವಹಣೆಗೆ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನ ಬಳಸಲು ಹಿಂದಿನ ಇಲಾಖೆ ಮುಂದಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.

ಇಂಧನ ಸಚಿವ ಕೆ.ಜೆ. ಜಾರ್ಜ್ ಬಗ್ಗೆ ಮಾಹಿತಿ ನೀಡಿದ್ದು, ಉಪಗ್ರಹ ಚಿತ್ರ ಬಳಕೆ ಮಾಡಿಕೊಂಡು ಪ್ರದೇಶವಾರು ಬೆಳೆ, ವಿದ್ಯುತ್ ಬೇಡಿಕೆ ಅಂದಾಜಿಸಿ ಆಯಾ ವಿದ್ಯುತ್ ಉಪ ಕೇಂದ್ರಕ್ಕೆ ಒದಗಿಸುವುದು ಎಐ ತಂತ್ರಜ್ಞಾನ ಬಳಕೆಯ ಉದ್ದೇಶವಾಗಿದೆ. ಇದರಿಂದಾಗಿ ಬೆಳೆಗಳಿಗೆ ಅಗತ್ಯವಿರುವ ಕಾಲದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ, ವಿದ್ಯುತ್ ಉಪ ಕೇಂದ್ರ ಮತ್ತು ಟಿಸಿಗಳ ಕಾರ್ಯಕ್ಷಮತೆ, ವಿದ್ಯುತ್ ಲಭ್ಯತೆ ದಕ್ಷತೆ ಹೀಗೆ ಅನೇಕ ಉಪಯೋಗವಾಗುತ್ತದೆ. ವಿದ್ಯುತ್ ಬೇಡಿಕೆಯನ್ನು ಅಂದಾಜಿಸಿ ಪೂರೈಕೆ ವ್ಯವಸ್ಥೆಯನ್ನು ಎಐ ತಂತ್ರಜ್ಞಾನದಡಿ ನಿರ್ವಹಣೆ ಮಾಡಲು ಪೈಲೆಟ್ ಪ್ರಾಜೆಕ್ಟ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ರೈತರ ಹಿತ ರಕ್ಷಣೆಗಾಗಿ ನೀರಾವರಿ ಪಂಪ್ಸೆಟ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ. 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಪೂರೈಕೆ ಮುಂದುವರೆಯಲಿದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ರೈತರ ಸಹಕಾರದಿಂದ ಇದುವರೆಗೆ 32 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದು, ಇನ್ನೂ ಎರಡು ಲಕ್ಷ ಪಂಪ್ಸೆಟ್ ಗಳು ಬಾಕಿ ಉಳಿದಿವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read