ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ನೌಚಂಡಿ ಮೇಳದಲ್ಲಿ ತಲೆ ತಗ್ಗಿಸುವ ಕೆಲಸ ನಡೆದಿದೆ. ಜೋಡಿಯೊಂದು ಸಾರ್ವಜನಿಕರ ಮುಂದೆ ಲಿಪ್ ಲಾಕ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರ್ಮಿಕ ಸ್ಥಳದಲ್ಲಿ ಸಾರ್ವಜನಿಕವಾಗಿ ಮುತ್ತಿಟ್ಟ ಜೋಡಿ ಬಗ್ಗೆ ತನಿಖೆ ನಡೆಸುವಂತೆ ಹಿಂದೂ ಸಂಘಟನೆ ಆಗ್ರಹಿಸಿದೆ.
ನೌಚಂಡಿ ಮೇಳದಲ್ಲಿ ದಂಪತಿ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡೋದನ್ನು ವಿಡಿಯೋದಲ್ಲಿ ನೋಡಬಹುದು. ಸುತ್ತ ಅನೇಕರು ನೆರೆದಿದ್ದು, ಕಿಸ್ ಮಾಡಿದ ನಂತ್ರ ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡುವ ಚಾಲೆಂಜನ್ನು ಈ ಜೋಡಿ ಸ್ವೀಕರಿಸಿದ್ದರು ಎನ್ನಲಾಗ್ತಿದೆ.
ಶನಿವಾರ ನಡೆದ ಮೇಳದಲ್ಲಿ ಈ ಘಟನೆ ನಡೆದಿದೆ. ವಿಡಿಯೋ ನೋಡಿದ ಬಳಕೆದಾರರು ಕೆಂಡಾಮಂಡಲವಾಗಿದ್ದಾರೆ. ಸೂಕ್ತ ತನಿಖೆಗೆ ಕೆಲವರು ಆಗ್ರಹಿಸಿದ್ರೆ ಮತ್ತೆ ಕೆಲವರು ಸಾರ್ವಜನಿಕ ಪ್ರದೇಶದಲ್ಲಿ ಇಂಥ ಕೆಲಸ ಮಾಡಲು ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ನಡೆದ ಈ ಘಟನೆಯನ್ನು ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಕೂಡ ನಡೆದಿದೆ.
https://twitter.com/shaluagrawal3/status/1815092257252671927?ref_src=twsrc%5Etfw%7Ctwcamp%5Etweetembed%7Ctwterm%5E1815092257252671927%7Ctwgr%5Eecf3b481ee66cf11f727bc659893af800cfb72bb%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fkissingchallengeviralvideocoupleacceptsdareshareskissinpublicatnauchandimelainmeerut-newsid-n623122698