ಮಕ್ಕಳಿಗಾಗಿ ಮಾಡಿ ಮಗ್ ಪಾಸ್ತಾ

ಪಾಸ್ತಾ ಮಕ್ಕಳ ಅಚ್ಚುಮೆಚ್ಚಿನ ಡಿಶ್. ಪಾಸ್ತಾ ಮಾಡಲು ತುಂಬಾ ಸಮಯ ಬೇಕು. ಆದ್ರೆ ಕಡಿಮೆ ಸಮಯದಲ್ಲಿ ಮಗ್ ಪಾಸ್ತಾ ಮಾಡುವು ವಿಧಾನ ಇಲ್ಲಿದೆ.

ಮಗ್ ಪಾಸ್ತಾಕ್ಕೆ ಬೇಕಾಗುವ ಪದಾರ್ಥ :

ಬೇಯಿಸಿದ ಪಾಸ್ತಾ – 1 ಕಪ್

ಪಿಜ್ಜಾ ಸಾಸ್ ಅಥವಾ ಟೊಮೆಟೊ ಪ್ಯೂರಿ – 1/4 ಕಪ್

ಮೇಯೋನೀಸ್ – 2 ಚಮಚ

ತುರಿದ ಚೀಸ್ – 4-6 ಚಮಚ

ರುಚಿಗೆ ತಕ್ಕಷ್ಟು ಉಪ್ಪು

ಪುದೀನ ಎಲೆಗಳು – 1 ಚಮಚ

ಮಗ್ ಪಾಸ್ತಾ ಮಾಡುವ ವಿಧಾನ :

ಒಂದು ಪಾತ್ರೆಗೆ ಪಾಸ್ತಾ, ಪಿಜ್ಜಾ ಸಾಸ್, ಮೇಯೋನೀಸ್, ಉಪ್ಪನ್ನು ಸೇರಿಸಿ. ಈಗ ಒಂದು ಮಗ್ ತೆಗೆದುಕೊಂಡು ಅದರ ಅರ್ಧಕ್ಕೆ ಪಾಸ್ತಾ ಮಿಶ್ರಣವನ್ನು ಹಾಕಿ. ಅದರ ಮೇಲೆ ತುರಿದ ಚೀಸ್ ಸೇರಿಸಿ. ನಂತ್ರ ಉಳಿದ ಪಾಸ್ತಾವನ್ನು ಮಗ್ ಗೆ ಹಾಕಿ. 4-5 ನಿಮಿಷಗಳ ಕಾಲ ಮೈಕ್ರೊವೇವ್‌ನಲ್ಲಿ ಬಿಸಿ ಮಾಡಿ. ಮೈಕ್ರೋವೇವ್ ನಲ್ಲಿ ಬಿಸಿ ಮಾಡುವ ಮಗ್ ಮಾತ್ರ ಬಳಸಿ. ನಂತ್ರ ಪುದೀನ ಎಲೆಗಳಿಂದ ಪಾಸ್ತಾವನ್ನು ಅಲಂಕರಿಸಿ ಮಕ್ಕಳಿಗೆ ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read