ಯುವಜನತೆಯಲ್ಲಿ ಕಿಡ್ನಿ ಸ್ಟೋನ್ ಹೆಚ್ಚಾಗಲು ಕಾರಣ ಇದು

ಈಗಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗ್ತಿದೆ. ಯುವಜನರು ಈ ಸಮಸ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗ್ತಿದ್ದಾರೆ. ಇದರ ರೋಗ ಲಕ್ಷಣ ಆರಂಭದಲ್ಲಿ ಪತ್ತೆಯಾಗೋದಿಲ್ಲ. ಸಮಸ್ಯೆ ಹೆಚ್ಚಾದ್ಮೇಲೆ ಅದು ಗಂಭೀರ ಸ್ವರೂಪ ಪಡೆಯುತ್ತದೆ. ಆಗ ಅದ್ರಿಂದ ಗುಣಮುಖರಾಗೋದು ಕಷ್ಟವಾಗುತ್ತದೆ. ಕಿಡ್ನಿ ಸ್ಟೋನ್‌, ಕಿಡ್ನಿ ಗಂಭೀರ ಖಾಯಿಲೆಗೆ ಮುಖ್ಯ ಕಾರಣ ಯುವಕರ ಆಹಾರ ಪದ್ಧತಿ ಮತ್ತು ಜೀವನಶೈಲಿ.

ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುವ ಕಲ್ಲನ್ನು ಕಿಡ್ನಿ ಸ್ಟೋನ್‌ ಎಂದು ಕರೆಯಲಾಗುತ್ತದೆ. ಇದು ಖನಿಜಗಳು ಮತ್ತು ಲವಣಗಳ ಗಟ್ಟಿಯಾದ ನಿಕ್ಷೇಪವಾಗಿದೆ. ಇದು ಮೂತ್ರಪಿಂಡಗಳು ಅಥವಾ ಮೂತ್ರದ ಮೂಲಕ ರೂಪುಗೊಳ್ಳುತ್ತದೆ. ಈ ಕಲ್ಲುಗಳು ಗಾತ್ರದಲ್ಲಿ ಬದಲಾಗುತ್ತವೆ. ಮರಳಿನ ಗಾತ್ರದಿಂದ  ಗಾಲ್ಫ್ ಚೆಂಡಿನಷ್ಟು ದೊಡ್ಡದಾಗುತ್ತದೆ.

ಮೂತ್ರಪಿಂಡದ ಕಲ್ಲಿಗೆ ಕಾರಣ :

ಆಹಾರ : ಸೋಡಿಯಂ, ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ ಕಿಡ್ನಿ ಸ್ಟೋನ್‌ ಗೆ ಕಾರಣವಾಗುತ್ತದೆ.  ಕರಿದ ಆಹಾರ ಮತ್ತು  ಜಂಕ್ ಫುಡ್‌ ಮೂತ್ರಪಿಂಡವನ್ನು ಮತ್ತಷ್ಟು ಹದಗೆಡಿಸುತ್ತದೆ. ಪಾಲಕ್, ಡ್ರೈ ಫ್ರೂಟ್ಸ್‌  ಮತ್ತು ಚಾಕೊಲೇಟ್‌ನಂತಹ ಆಕ್ಸಲೇಟ್ ಆಹಾರದ ಅತಿಯಾದ ಸೇವನೆ ಕೂಡ ಒಳ್ಳೆಯದಲ್ಲ.

ನೀರು : ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಮೂರರಿಂದ ನಾಲ್ಕು ಲೀಟರ್‌ ನೀರು ಸೇವನೆ ಮಾಡಬೇಕು. ದೇಹಕ್ಕೆ ನೀರು ಸರಿಯಾಗಿ ಸಿಗದೆ ಹೋದಾಗ ಮೂತ್ರ ದಪ್ಪಗಾಗುತ್ತದೆ. ಇದ್ರಿಂದ ಮೂತ್ರಪಿಂಡದಲ್ಲಿ ಕಲ್ಲು ರಚನೆಯಾಗುತ್ತದೆ.

ಬೊಜ್ಜು : ಅತಿಯಾದ ಬೊಜ್ಜು ಕೂಡ ಮೂತ್ರಪಿಂಡದ ಕಲ್ಲಿಗೆ ಕಾರಣ. ಸೂಕ್ತ ವ್ಯಾಯಾಮ ಹಾಗೂ ಆಹಾರದ ಮೂಲಕ ಬೊಜ್ಜನ್ನು ಕರಗಿಸಿಕೊಳ್ಳುವ ಅವಶ್ಯಕತೆ ಇದೆ.

ಪರಿಸರ : ಮಾಲಿನ್ಯ ಹಾಗೂ ಕೆಟ್ಟ ಪರಿಸರ ಮೂತ್ರಪಿಂಡದ ಕಲ್ಲಿಗೆ ಕಾರಣವಾಗುತ್ತದೆ. ರಾಸಾಯನಿಕ ನೀರು ಕೂಡ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಪದಾರ್ಥಗಳ ಮಟ್ಟವನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read