BIG NEWS: ವಂಚನೆ ಆರೋಪ : ಇಬ್ಬರು ನಿರ್ಮಾಪಕರಿಗೆ ನೋಟಿಸ್ ಕಳುಹಿಸಿದ ಕಿಚ್ಚ ಸುದೀಪ್ , ಉತ್ತರಿಸಲು ಡೆಡ್ ಲೈನ್

ಬೆಂಗಳೂರು: ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ನಿರ್ಮಾಪಕರ ವಿರಿದ್ಧ ನಟ ಸುದೀಪ್ ನೋಟೀಸ್ ನೀಡಿದ್ದು, ಉತ್ತರ ನೀಡಿ ಕ್ಷಮೆ ಯಾಚಿಸುವಂತೆ ಗಡುವು ನೀಡಿದ್ದಾರೆ.

ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ವಕೀಲ ನಾಗೇಶ್ ಮೂಲಕವಾಗಿ ಇಬ್ಬರು ನಿರ್ಮಾಪಕರಿಗೆ ನೋಟೀಸ್ ಕಳುಹಿಸಿದ್ದು, 3 ದಿನಗಳ ಒಳಗಾಗಿ ಉತ್ತರ ನೀಡಬೇಕು. ಆರೋಪದಿಂದ ಆಗಿರುವ ಮಾನನಷ್ಟಕ್ಕೆ 10 ಕೋಟಿ ರೂಪಾಯಿ ನೀಡುವಂತೆ ಹಾಗೂ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದ್ದಾರೆ.

ಇಲ್ಲವಾದಲ್ಲಿ ಐಪಿಸಿ ಸೆಕ್ಷನ್ 499, 500ರ ಅಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read