ಬೆಂಗಳೂರು : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್-11 ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್ ಬಹಳ ಅಚ್ಚುಕಟ್ಟಾಗಿ, ಸೊಗಸಾಗಿ ನಡೆಸಿಕೊಡುತ್ತಿದ್ದಾರೆ. ಇವರ ಖಡಕ್ ಮಾತಿಗೆ, ಸ್ಪರ್ಧಿಗಳನ್ನು ಕ್ಲಾಸ್ ತೆಗೆದುಕೊಳ್ಳುವ ರೀತಿಗೆ, ಸ್ಪರ್ಧಿಗಳನ್ನು ಕಾಲೆಳೆಯುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಆದರೆ ಇನ್ಮುಂದೆ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ನಟ ಸುದೀಪ್ ಘೋಷಣೆ ಮಾಡಿದ್ದಾರೆ. ಸುದೀಪನ ಸಡನ್ ನಿರ್ಧಾರಕ್ಕೆ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 11 ನಟ ಸುದೀಪ್ ಹೋಸ್ಟ್ ಮಾಡುವ ಕೊನೆ ಸೀಸನ್ ಆಗಿದೆ. ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ಗುಡ್ ಬೈ ಹೇಳಲು ಸುದೀಪ್ ನಿರ್ಧರಿಸಿದ್ದಾರೆ.
#BBK11 ಬಗ್ಗೆ ತೋರಿಸಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು.ಟಿವಿಆರ್ (ಸಂಖ್ಯೆ) ನೀವೆಲ್ಲರೂ ನನ್ನ ಬಗ್ಗೆ ತೋರಿಸಿದ ಪ್ರೀತಿಯ ಬಗ್ಗೆ ಸಾಕಷ್ಟು ಮಾತನಾಡುತ್ತದೆ.ಇದು ಒಟ್ಟಿಗೆ 10 + 1 ವರ್ಷಗಳ ಉತ್ತಮ ಪ್ರಯಾಣವಾಗಿದೆ, ಬಿಬಿಕೆಯ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ. ಈ ಸೀಸನ್ ನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಸಹ ನಿಮ್ಮೆಲ್ಲರನ್ನೂ ಅತ್ಯುತ್ತಮವಾಗಿ ರಂಜಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
https://twitter.com/KicchaSudeep/status/1845492822348042416