ಮೂರು ಕೋಟಿ ಮೌಲ್ಯದ ಮರ್ಸಿಡಿಸ್‌ನಲ್ಲಿ ಮಿಂಚುತ್ತಿದ್ದಾರೆ ಕಿಯಾರಾ

ತಮ್ಮ ವೃತ್ತಿ ಜೀವನದ ಅತ್ಯುತ್ತಮ ಘಳಿಗೆಗಳನ್ನು ಜೀವಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ವಿಪರೀತ ಪ್ರಾಜೆಕ್ಟ್‌ಗಳನ್ನು ಕೈಯಲ್ಲಿ ಹೊಂದಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲ್ಹೋತ್ರಾರನ್ನು ಮದುವೆಯಾದ ಕಿಯಾರಾ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ.

ತಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆಯೇ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಖರೀದಿಸಿರುವ ಕಿಯಾರಾ, ಮುಂಬಯಿಯ ಬೀದಿಗಳಲ್ಲಿ ಈ ಕಾರಿನಲ್ಲಿ ಓಡಾಡುತ್ತಾ ಮಿಂಚುತ್ತಿದ್ದಾರೆ.

ಜಪಾನ್‌ನಿಂದ ಮರಳಿ ಬಂದ ಕಿಯಾರಾ ಮೂರು ಕೋಟಿ ರೂ. ಮೌಲ್ಯದ ಈ ಹೊಸ ಕಾರನ್ನು ತಮಗೆ ತಾವೇ ಉಡುಗೊರೆಯಾಗಿ ಕೊಟ್ಟುಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರ ’ಸತ್ಯಪ್ರೇಮ್ ಕೀ ಕಥಾ’ದ ಬಿಡುಗಡೆಗೂ ಮುನ್ನ, ಚಿತ್ರದ ಡಬ್ಬಿಂಗ್‌ಗಾಗಿ ಸ್ಟುಡಿಯೋಗೆ ಮರ್ಸಿಡಿಸ್ ಮೇಬ್ಯಾಕ್ S580 4ಮ್ಯಾಟಿಕ್‌ನಲ್ಲಿ ಆಗಮಿಸಿದ್ದಾರೆ ಕಿಯಾರಾ.

ತಮ್ಮ ಅಸಲಿ ಹೆಸರು ಆಲಿಯಾ ಜಗದೀಪ್ ಅಡ್ವಾಣಿ ಹೆಸರಿನಲ್ಲಿ ಈ ಕಾರನ್ನು ಮೇ 26, 2023ರಂದು ನೋಂದಣಿ ಮಾಡಿಸಿಕೊಂಡಿದ್ದಾರೆ ಕಿಯಾರಾ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read