ಮುಂಗಡ ಬುಕಿಂಗ್ ನಲ್ಲಿ ಹೊಸ ದಾಖಲೆ ಬರೆದ ʼಕಿಯಾ ಸೆಲ್ಟೋಸ್ʼ

ಮುಂಗಡ ಬುಕಿಂಗ್ ಗಾಗಿ ಅವಕಾಶ ನೀಡಿದ ಕೇವಲ 24 ಗಂಟೆಯಲ್ಲೇ ಹೊಸ ಕಿಯಾ ಸೆಲ್ಟೋಸ್ 13,424 ಮುಂಗಡ ಬುಕಿಂಗ್ ಪಡೆದಿದೆ. ಈ ಮೂಲಕ ಅತಿ ಹೆಚ್ಚು ಮುಂಗಡ ಬುಕಿಂಗ್ ನೊಂದಿಗೆ ಮಧ್ಯಮ ಗಾತ್ರದ SUV ಹೊಸ ದಾಖಲೆ ಬರೆದಿದೆ.

13,424 ಮುಂಗಡ ಬುಕಿಂಗ್ ಪೈಕಿ 1,973 ಬುಕಿಂಗ್‌ಗಳನ್ನು ಕೆ-ಕೋಡ್ ಬಳಸಿ ಮಾಡಲಾಗಿದೆ. ಆದ್ಯತೆಯ ವಿತರಣೆಯ ಮೇಲೆ ತನ್ನ ಹಳೆಯ ಗ್ರಾಹಕರಿಗೆ ಕೆ- ಕೋಡ್‌ ರಚಿಸುವ ಅವಕಾಶವನ್ನು ಒಂದು ದಿನದ ಮಟ್ಟಿಗೆ ನೀಡಿತ್ತು.

ಹೊಸ ಕಿಯಾ ಸೆಲ್ಟೋಸ್‌ನ ಬುಕಿಂಗ್‌ಗಳು ಜುಲೈ 14, 2023 ರಂದು ಪ್ರಾರಂಭವಾಯಿತು. ಅಧಿಕೃತ ಕಿಯಾ ಇಂಡಿಯಾ ವೆಬ್‌ಸೈಟ್ ಮತ್ತು ದೇಶಾದ್ಯಂತ ಅಧಿಕೃತ ಕಿಯಾ ಡೀಲರ್‌ಶಿಪ್‌ಗಳ ಮೂಲಕ ಗ್ರಾಹಕರಿಗೆ ಬುಕಿಂಗ್ ಲಭ್ಯವಾಗುವಂತೆ ಮಾಡಲಾಗಿದೆ. ನಿರೀಕ್ಷಿತ ಖರೀದಿದಾರರು ಆರಂಭಿಕ ಮೊತ್ತ 25,000 ರೂ. ಪಾವತಿಸುವ ಮೂಲಕ ಬುಕಿಂಗ್ ಮಾಡಬಹುದು.

ನಾಲ್ಕು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಕಿಯಾದ ಸೆಲ್ಟೋಸ್ ಮಾದರಿ 5.3 ಲಕ್ಷ ಯುನಿಟ್‌ಗಳ ಉತ್ಪಾದನೆಯ ಮೂಲಕ ಗಮನ ಸೆಳೆದಿದೆ. ಇದರ ಹೊಸ ರೂಪ ಸೆಲ್ಟೋಸ್ ಫೇಸ್‌ಲಿಫ್ಟ್‌ ಕೂಡಾ ಭಾರೀ ಮುಂಗಡ ಬುಕಿಂಗ್ ನೊಂದಿಗೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಟೇ-ಜಿನ್ ಪಾರ್ಕ್ ಮಾತನಾಡಿ ಹೊಸ ಸೆಲ್ಟೋಸ್ ಗೆಲುವಿನ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನ ನೋಡುತ್ತಿರುವುದು ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಹೊಸ ಸೆಲ್ಟೋಸ್ ಇನ್ನೂ ಬೆಳೆಯುತ್ತದೆ ಎಂಬ ವಿಶ್ವಾಸವಿದೆ. ಮುಂದಿನ ದಿನಗಳಲ್ಲೂ ನಾವು ಮತ್ತಷ್ಟು ದಾಖಲೆ ನಿರ್ಮಿಸಲು ಮುಂದಾಗುತ್ತೇವೆ ಎಂದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read