2019ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುವ ವೇಳೆ ‘ಎಲ್ಲ ಕಳ್ಳರು ಮೋದಿ ಎಂಬ ಉಪ ನಾಮವನ್ನೇ ಏಕೆ ಹೊಂದಿರುತ್ತಾರೆ’ ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು. ರಾಹುಲ್ ಅವರ ಈ ಹೇಳಿಕೆ ವಿರುದ್ಧ ಗುಜರಾತಿನ ಸೂರತ್ ನಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ವಿಚಾರಣೆ ನಡೆದು ಶುಕ್ರವಾರದಂದು ತೀರ್ಪು ಹೊರಬಿದ್ದಿದ್ದು, ರಾಹುಲ್ ಗಾಂಧಿ ದೋಷಿ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಇದಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದ್ದು, ಇದರ ಬೆನ್ನಲ್ಲೇ ರಾಹುಲ್ ಗಾಂಧಿಯವರಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿ ಜಾಮೀನು ನೀಡಲಾಗಿದೆ.
ಇದರ ಮಧ್ಯೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದ್ದು, ಹೀಗಾಗಿ ಅವರು ಪ್ರತಿನಿಧಿಸುವ ಕೇರಳದ ವಯನಾಡು ಕ್ಷೇತ್ರ ಖಾಲಿ ಉಳಿದಂತಾಗಿದೆ. ಇದೆಲ್ಲದರ ನಡುವೆ ಕಾಂಗ್ರೆಸ್ ಮಾಜಿ ನಾಯಕಿ ಹಾಗೂ ಹಾಲಿ ಬಿಜೆಪಿಯಲ್ಲಿರುವ ಖುಷ್ಬೂ ಸುಂದರ್ ಅವರ ಹಳೆ ಟ್ವೀಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2018ರಲ್ಲಿ ಕಾಂಗ್ರೆಸ್ ನಲ್ಲಿದ್ದ ವೇಳೆ ಖುಷ್ಬೂ ಸುಂದರ್ ಈ ಟ್ವೀಟ್ ಮಾಡಿದ್ದು, ಇದರಲ್ಲಿ ‘ಅಲ್ಲಿ ಮೋದಿ…. ಇಲ್ಲಿ ಮೋದಿ….. ಎಲ್ಲಿ ನೋಡಿದರಲ್ಲಿ ಮೋದಿ…… ಭ್ರಷ್ಟಾಚಾರ ಮಾಡುವವರ ಉಪ ನಾಮವೆಲ್ಲ ಮೋದಿಯಾಗಿದೆ. ಮೋದಿ ಅಂದರೆ ಭ್ರಷ್ಟಾಚಾರ. ಹೀಗಾಗಿ ಭ್ರಷ್ಟಾಚಾರವನ್ನು ಮೋದಿ ಎಂದು ಬದಲಾಯಿಸೋಣ. ನೀರವ್#ಲಲಿತ್#ನಮೋ= ಭ್ರಷ್ಟಚಾರ’ ಎಂದು ಹೇಳಿದ್ದಾರೆ. ಇದನ್ನು ವೈರಲ್ ಮಾಡಿರುವ ಕಾಂಗ್ರೆಸ್ಸಿಗರು, ಖುಷ್ಬೂ ಅವರ ವಿರುದ್ಧವೂ ಕೇಸ್ ದಾಖಲಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
https://twitter.com/khushsundar/status/964126977358614528?ref_src=twsrc%5Etfw%7Ctwcamp%5Etweetembed%7Ctwterm%5E964126977358614528%7Ctwgr%5E
https://twitter.com/digvijaya_28/status/1639438259196686338?ref_src=twsrc%5Etfw%7Ctwcamp%5Etweetembed%7Ctwterm%5E1639438259196686338%7Ctwgr%5E45c22696ab78ca7df6ea6913bab153b3b21ce84e%7Ctwcon%5Es1_&ref_url=https%3A%2F%2Fwww.hindustantimes.com%2Findia-news%2Fkhushbu-sundar-s-old-tweet-viral-as-rahul-gandhi-convicted-disqualified-101679703009132.html
https://twitter.com/SpiritOfCongres/status/1639363201858142208?ref_src=twsrc%5Etfw%7Ctwcamp%5Etweetembed%7Ctwterm%5E1639363201858142208%7Ctwgr%5E45c22696ab78ca7df6ea6913bab153b3b21ce84e%7Ctwcon%5Es1_&ref_url=https%3A%2F%2Fwww.hindustantimes.com%2Findia-news%2Fkhushbu-sundar-s-old-tweet-viral-as-rahul-gandhi-convicted-disqualified-101679703009132.html