ಖೇಲೋ ಇಂಡಿಯಾ ಪದಕ ಗೆದ್ದವರಿಗೆ ಸರ್ಕಾರಿ ಹುದ್ದೆ : ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಘೋಷಣೆ

ನವದೆಹಲಿ: ಖೇಲೋ ಇಂಡಿಯಾ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಪದಕ ವಿಜೇತರು ಮತ್ತು ಮೂರನೇ ಸ್ಥಾನ ಪಡೆದವರು ಇನ್ನು ಮುಂದೆ ಕೇಂದ್ರ ಸರ್ಕಾರದಲ್ಲಿ ಕ್ರೀಡಾಪಟುಗಳಿಗೆ ನೀಡುವ ನೇಮಕಾತಿ, ಬಡ್ತಿ ಮತ್ತು ಇತರ ಪ್ರೋತ್ಸಾಹಕಗಳಿಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅನುರಾಗ್‌ ಠಾಕೂರ್‌ ಅವರು, ಅತ್ಯುತ್ತಮ ಕ್ರೀಡಾ ವ್ಯವಸ್ಥೆ ತಳಮಟ್ಟದಲ್ಲಿ ಪ್ರತಿಭೆಗಳನ್ನು ಘೋಷಿಸುವುದು ಪ್ರಧಾನಿ ಮೋದಿ ಕನಸು, ಇದಕ್ಕೆ ಅನುಗುಣವಾಗಿ ಖೇಳೋ ಇಂಡಿಯಾದ ಯೂತ್‌ ಯುನಿರ್ವಸಿಟಿ ಪ್ಯಾರಾ ಹಾಗೂ ಚಳಿಗಾಲದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರು ಇನ್ಮುಂದೆ ಸರ್ಕಾರಿ ಹುದ್ದೆಗೆ ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರಿ ಉದ್ಯೋಗಗಳು ಸೇರಿದಂತೆ ಪ್ರೋತ್ಸಾಹಕಗಳ ಮೂಲಕ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಲು ಪರಿಷ್ಕೃತ ಮಾನದಂಡಗಳನ್ನು ಹೊರಡಿಸಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಸೋಮವಾರ ಖೇಲೋ ಇಂಡಿಯಾ ಯೂತ್ ಗೇಮ್ಸ್ (18 ವರ್ಷಕ್ಕಿಂತ ಮೇಲ್ಪಟ್ಟವರು), ಖೇಲೋ ಇಂಡಿಯಾ ವಿಂಟರ್ ಗೇಮ್ಸ್, ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿ ಪದಕ ವಿಜೇತರನ್ನು ಅರ್ಹ ಅಭ್ಯರ್ಥಿಗಳ ಪಟ್ಟಿಗೆ ಸೇರಿಸುವುದಾಗಿ ಘೋಷಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read