ಬೆಂಗಳೂರು : ಬೆಂಗಳೂರಿನಲ್ಲಿ ಪಿಜಿ, ಹೋಟೆಲ್ ಗಳಿಂದ ಲ್ಯಾಪ್ ಟಾಪ್ ಕದಿಯುತ್ತಿದ್ದ ಖತರ್ನಾಕ್ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಬಿಟೆಕ್ ಪದವೀಧರೆ ಜಸ್ಸು ಅಗರ್ವಾಲ್ ಎಂಬಾಕೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಉದ್ಯೋಗ ಸಂದರ್ಶನದ ನೆಪದಲ್ಲಿ, ಅವಳು ಪಿಜಿಗಳಲ್ಲಿ ಉಳಿದುಕೊಂಡು ಮತ್ತು ನಂತರ ಕದ್ದ ಲ್ಯಾಪ್ ಟಾಪ್ ಗಳನ್ನು ಸೆಕೆಂಡ್ ಹ್ಯಾಂಡ್ ಬೆಲೆಯಲ್ಲಿ ಮಾರುತ್ತಿದ್ದಳು.
ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಮಾತನಾಡಿ, ಬೆಂಗಳೂರಿನ ವಿವಿಧ ಪೇಯಿಂಗ್ ಗೆಸ್ಟ್ ವಸತಿ ಮತ್ತು ಹೋಟೆಲ್ ಗಳಿಂದ ಲ್ಯಾಪ್ಟಾಪ್ಗಳನ್ನು ಕದ್ದಿದ್ದ ರಾಜಸ್ಥಾನ ಮೂಲದ 29 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯಿಂದ 10 ಲಕ್ಷ ಮೌಲ್ಯದ 24 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
https://twitter.com/ANI/status/1773911827933753730?ref_src=twsrc%5Etfw%7Ctwcamp%5Etweetembed%7Ctwterm%5E1773911827933753730%7Ctwgr%5Ea53fd1d4e1bb2371d71cd38ff8bb747625772e21%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews%3Fmode%3Dpwaaction%3Dclick