ಪೆಟ್ರೋಲ್ ಬಂಕ್ ಗೆ ಬಂದ ಖದೀಮರು ಸಿಬ್ಬಂದಿಗಳನ್ನೇ ಒತ್ತೆಯಾಳಾಗಿರಿಸಿ 1.75 ಲಕ್ಷ ದೋಚಿದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ದರೋಡೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 22 ರ ಸೋಮವಾರ ಬೆಳಗಿನ ಜಾವ ರಾಜಸ್ಥಾನದ ಬರಾನ್ನಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ನಲ್ಲಿ ಮುಸುಕುಧಾರಿಗಳು ಲೂಟಿ ಮಾಡಿದ್ದಾರೆ. ಬಂಕ್ ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು, ಲೂಟಿ ಮಾಡುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಸುಮಾರು ಐದರಿಂದ ಆರು ಮುಸುಕುಧಾರಿಗಳು ಬೆಳಗಿನ ಜಾವ 2:15 ರ ಸುಮಾರಿಗೆ ಅಂಬಿಕಾ ಪೆಟ್ರೋಲ್ ಬಂಕ್ ಅನ್ನು ಲೂಟಿ ಮಾಡಿದ್ದಾರೆ. ದರೋಡೆಕೋರರು ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಸುಮಾರು 1.75 ಲಕ್ಷ.ಗಳನ್ನು ಲೂಟಿ ಮಾಡಿದ ಪರಾರಿಯಾಗಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಮುಸುಕುಧಾರಿಗಳು ಪೆಟ್ರೋಲ್ ಬಂಕ್ ಉದ್ಯೋಗಿಯ ಕೈಕಾಲುಗಳನ್ನು ಕಟ್ಟಿ ಹಾಕಿರುವುದನ್ನು ಕಾಣಬಹುದು. ವೈರಲ್ ವೀಡಿಯೊಗೆ ಬರಾನ್ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಘಟನೆಯ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
सम्बन्धित थानाधिकारी द्वारा अग्रिम कार्यवाही जारी है।
— Baran Police (@BaranPolice) September 22, 2025
Baran के अंता में देर रात पेट्रोल पंप पर लूट का मामला, घटना का CCTV फुटेज आया सामने | Rajasthan News#FINVideo #RajasthanWithFirstIndia #BaranNews #CrimeNews @BaranPolice pic.twitter.com/2lt6VaP2CT
— First India News (@1stIndiaNews) September 22, 2025