ಮಧುಮೇಹ ಒಂದು ಗಂಭೀರ ಕಾಯಿಲೆಯಾಗಿದೆ. ಡಯಾಬಿಟೀಸ್ ಸಮಯದಲ್ಲಿ ನಿಮ್ಮ ಇನ್ಸುಲಿನ್ ಮಟ್ಟ ಕಡಿಮೆ ಇರುತ್ತೆ. ಸಣ್ಣ ನಿರ್ಲಕ್ಷ್ಯದಿಂದ ಈ ಕಾಯಿಲೆ ಗಂಭೀರ ಸ್ವರೂಪವನ್ನೇ ಪಡೆದುಕೊಳ್ಳಬಹುದು. ಹೀಗಾಗಿ ಮಧುಮೇಹಿಗಳು ತಮ್ಮ ಆರೋಗ್ಯದ ಕಡೆ ಎಷ್ಟು ಕಾಳಜಿ ಹೊಂದಿದರೂ ಸಹ ಅದು ಕಡಿಮೆಯೇ. ನೀವು ಕೂಡ ಮಧುಮೇಹದಿಂದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಕೆಸುವಿನ ಎಲೆಯನ್ನ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
ಹಸಿಯಾದ ಕೆಸುವಿನ ಎಲೆಯನ್ನ ತಿನ್ನಲೇಬಾರದು. ಇದರಲ್ಲಿ ವಿಷಕಾರಿ ಕ್ಯಾಲ್ಸಿಯಂ ಆಕ್ಸಲೇಟ್ ಇರೋದ್ರಿಂದ ಹಸಿಯಾದ ಕೆಸುವಿನ ಎಲೆ ಸೇವನೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನ ಬೀರುತ್ತೆ . ಹೀಗಾಗಿ ಸರಿಯಾಗಿ ಬೇಯಿಸಿ ಈ ಎಲೆಯನ್ನ ಸೇವಿಸೋದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
ಇದರಲ್ಲಿ ವಿಟಾಮಿನ್ ಎ, ವಿಟಾಮಿನ್ ಸಿ, ವಿಟಾವಿನ್ ಇ, ವಿಟಾಮಿನ್ ಬಿ 6 , ಮ್ಯಾಗ್ನೀಷಿಯಂ, ಕಬ್ಬಿಣಾಂಶ, ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್ ಸೇರಿದೆ.
ಕೆಸುವಿನ ಎಲೆಯಲ್ಲಿ ಫೈಬರ್ ಅಂಶ ಅಡಗಿದೆ. ಇದು ದೇಹದಲ್ಲಿ ಸಕ್ಕರೆ ಪ್ರಮಾಣವನ್ನ ಸರಿದೂಗಿಸುವ ಕೆಲಸ ಮಾಡುತ್ತೆ. ದೇಹದಲ್ಲಿರುವ ಇನ್ಸುಲಿನ್ ಹಾಗೂ ಗ್ಲುಕೋಸ್ನ್ನು ಬಿಡುಗಡೆ ಮಾಡುವಂತೆ ಮಾಡುತ್ತೆ. ಹೀಗಾಗಿ ಮಧುಮೇಹಿಗಳು ಕೆಸುವಿನ ಎಲೆಯಿಂದ ತಯಾರಿಸಿದ ಆಹಾರವನ್ನ ಸೇವಿಸಿ.
ಕೇವಲ ಮಧುಮೇಹಿಗಳು ಮಾತ್ರವಲ್ಲದೇ ತೂಕ ಕಡಿಮೆ ಮಾಡಬೇಕೆಂದುಕೊಂಡವರು, ಮೂಳೆಗಳ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕು ಅಂತಿದ್ರೆ, ರೋಗ ನಿರೋಧಕ ಶಕ್ತಿ ಹೆಚ್ಚುಸುವವರು ನೀವಾಗಿದ್ದರೆ ಕೆಸುವಿನ ಎಲೆಯಿಂದ ತಯಾರಿಸಿದ ಖಾದ್ಯ ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ.
ಯಾರು ಕೆಸುವಿನ ಎಲೆಯನ್ನ ಸೇವಿಸಬಾರದು..?
ಕೆಸುವಿನ ಎಲೆಯನ್ನ ಸೇವಿಸಿದ್ರೆ ಕೆಲವರಿಗೆ ಗಂಟಲಿನಲ್ಲಿ ತುರಿಕೆ ಆರಂಭವಾಗುತ್ತೆ.
ಅಸ್ತಮಾದಿಂದ ಬಳಲುತ್ತಿರುವವರಿಗೆ ಇದು ಸೂಕ್ತ ಆಯ್ಕೆಯಲ್ಲ.
ಮೊಣಕಾಲು ನೋವು ಹಾಗೂ ಕಫದ ಸಮಸ್ಯೆ ಹೊಂದಿರುವವರೂ ಸಹ ಕೆಸುವನ್ನ ಸೇವಿಸಬೇಡಿ.
ಆಸಿಡಿಟಿ ಸಮಸ್ಯೆ ಹೊಂದಿರುವವರಿಗೂ ಕೆಸು ಸೂಕ್ತ ಆಯ್ಕೆಯಲ್ಲ.