ನರ್ಸ್ ಕುಟುಂಬಕ್ಕೆ ಒಲಿದ ಅದೃಷ್ಟ: ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಬಹುಮಾನ…!

ಅಬುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ನರ್ಸ್ ಕುಟುಂಬಕ್ಕೆ ಅದೃಷ್ಟ ಒಲಿದು ಬಂದಿದೆ. ಬಿಗ್ ಟಿಕೆಟ್ ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಬಹುಮಾನ ಬಂದಿದ್ದು, ಕುಟುಂಬ ಸಂತಸದ ಕಡಲಲ್ಲಿ ತೇಲಿದೆ.

ಲವಲ್ ಮೋಲ್ ಅಚ್ಚಮ್ಮ ಮತ್ತು ಕುಟುಂಬ ಈ ಅದೃಷ್ಟ ಶಾಲಿಗಳಾಗಿದ್ದು, ಇವರ ಪತಿ ಪ್ರತಿ ತಿಂಗಳು ಅಬುದಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಟರಿ ಖರೀದಿಸುತ್ತಿದ್ದರು ಎಂದು ಹೇಳಲಾಗಿದೆ.

ಇದೀಗ ಈ ಭಾರೀ ಮೊತ್ತ ಅವರಿಗೆ ಲಭಿಸಿದ್ದು, ಈ ಪೈಕಿ ಒಂದು ಭಾಗವನ್ನು ಕುಟುಂಬದ ಇತರೆ ಸದಸ್ಯರಿಗೆ ನೀಡುವುದಾಗಿ ಹೇಳಿದ್ದಾರೆ. ಇನ್ನುಳಿದಂತೆ ಮಕ್ಕಳ ಶಿಕ್ಷಣಕ್ಕೆ ಒಂದಷ್ಟು ಹಣ ಬಳಸಿಕೊಂಡು ಉಳಿದಿದ್ದನ್ನು ದಾನ ಮಾಡುವುದಾಗಿ ಕಳೆದ 21 ವರ್ಷಗಳಿಂದ ಅಬುದಾಬಿಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಅಚ್ಚಮ್ಮ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read