ಕೇರಳ: ‘ನರಭಕ್ಷಕ’ ಹುಲಿಯ ಹೊಟ್ಟೆಯಲ್ಲಿ ಮಹಿಳೆ ಕೂದಲು, ಆಭರಣ, ಬಟ್ಟೆ ಪತ್ತೆ

ಕೇರಳದ ವಯನಾಡು ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಮಹಿಳೆಯ ಸಾವಿಗೆ ಕಾರಣವಾದ ‘ನರಭಕ್ಷಕ’ ಹುಲಿ ಸೋಮವಾರ ಸಾವನ್ನಪ್ಪಿದೆ. ಅರಣ್ಯ ಅಧಿಕಾರಿಗಳ ಪ್ರಕಾರ, ಶವಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಮೃತ ಮಹಿಳೆಯ ಕೂದಲು, ಬಟ್ಟೆ ಮತ್ತು ಕಿವಿಯೋಲೆಗಳು ಇರುವುದು ಕಂಡು ಬಂದಿದೆ.

ಕಾಡಿನ ಅಂಚಿನ ಬಳಿಯ ತೋಟದಲ್ಲಿ ಕಾಫಿ ಬೀಜಗಳನ್ನು ಸಂಗ್ರಹಿಸುತ್ತಿದ್ದಾಗ ಮಹಿಳೆಯ ಮೇಲೆ ಹುಲಿ ದಾಳಿ ಮಾಡಿತ್ತು. ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಮುಂಜಾನೆ ವನ್ಯಜೀವಿ ಅಧಿಕಾರಿಗಳ ತಂಡ ಪತ್ತೆಹಚ್ಚಿತು. ನಂತರ ಸೂರ್ಯೋದಯದ ನಂತರ ವಸತಿ ಪ್ರದೇಶವಾದ ಪಿಲಕಾವುವಿನ ಮನೆಯ ಹಿಂದೆ ಅದು ನಿರ್ಜೀವವಾಗಿ ಕಂಡುಬಂದಿತು.

ಮೃತ ಮಹಿಳೆಯ ಕೂದಲು, ಉಡುಗೆ ಮತ್ತು ಎರಡು ಕಿವಿಯೋಲೆಗಳು ಅದರ ಕರುಳನ್ನು ಪರೀಕ್ಷಿಸಿದಾಗ ಕಂಡುಬಂದವು. ಆದ್ದರಿಂದ, ಅದು ಅದೇ ಹುಲಿ ಎಂದು ನಾವು ಯಾವುದೇ ಸಂದೇಹವಿಲ್ಲದೆ ಹೇಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯ ಸಾವು ಈ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು, ರಾಜ್ಯ ಸರ್ಕಾರವು ಭಾನುವಾರ ಹುಲಿಯನ್ನು ‘ನರಭಕ್ಷಕ’ ಎಂದು ಘೋಷಿಸಿ ಅದರ ಹತ್ಯೆಗೆ ಅಧಿಕಾರ ನೀಡಿತ್ತು

ಹುಲಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಮುಖ್ಯ ವನ್ಯಜೀವಿ ವಾರ್ಡನ್ ಪ್ರಮೋದ್ ಜಿ. ಕೃಷ್ಣನ್, ಹುಲಿಯ ಕುತ್ತಿಗೆಯಲ್ಲಿ ನಾಲ್ಕು ಹೊಸ ಗಾಯಗಳು ಅದರ ಸಾವಿಗೆ ಕಾರಣವಾಗಿರಬಹುದು. ಭಾನುವಾರ ಹುಡುಕಾಟ ತೀವ್ರಗೊಳಿಸಿದ್ದು, ಅದು ಕಾಡಿನ ಆಳಕ್ಕೆ ಹಿಮ್ಮೆಟ್ಟಿದಾಗ ಮತ್ತೊಂದು ದೊಡ್ಡ ಹುಲಿಯೊಂದಿಗಿನ ಕಾದಾಟದಲ್ಲಿ ಗಾಯಗೊಂಡು ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.

ಶನಿವಾರ ಪಂಚರಕೊಲ್ಲಿ ಪ್ರದೇಶದಲ್ಲಿ ರಾಧಾ ಎಂಬ ಮಹಿಳೆ ಸಾವನ್ನಪ್ಪಿದ್ದು, ಹುಲಿ ಹೊಟ್ಟೆಯಲ್ಲಿ ಆಕೆಯ ಕೂದಲು, ಬಟ್ಟೆ ಮತ್ತು ಕಿವಿಯೋಲೆಗಳು ಕಂಡುಬಂದಿದ್ದರಿಂದ, ಆಖೆಯನ್ನು ಕೊಂದಿದ್ದು ಅದೇ ಹುಲಿ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಮುಖ್ಯ ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ. ಅರುಣ್ ಜಕಾರಿಯಾ ನೇತೃತ್ವದ ವಿಶೇಷ ವನ್ಯಜೀವಿ ತಂಡವು ಹುಲಿಗಾಗಿ ದಿನದ 24 ಗಂಟೆಗಳ ಕಾಲ ಹುಡುಕಾಟ ನಡೆಸಿತ್ತು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿಸಿಎಫ್) ಉತ್ತರ ವೃತ್ತದ ಕೆ.ಎ.ಸ್ ದೀಪಾ ತಿಳಿಸಿದ್ದಾರೆ. ನಂತರ, ಪಿಲಕಾವು ಪ್ರದೇಶದಲ್ಲಿ ಹುಲಿ ಮೃತಪಟ್ಟಿರುವುದು ಕಂಡುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read