Watch Video | ಕುಡಿತದ ಅಮಲಿನಲ್ಲಿ ರೈಲ್ವೆ ಹಳಿಯ ಮೇಲೆ ಕಾರು ಓಡಿಸಿದ ಭೂಪ……!

ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಕಾರನ್ನು ರೈಲ್ವೆ ಹಳಿಗಳ ಮೇಲೆ ಓಡಿಸಿದಂತ ವಿಚಿತ್ರ ಘಟನೆಯೊಂದು ಕೇರಳದಲ್ಲಿ ಸಂಭವಿಸಿದೆ. ಈ ರೀತಿ ವಿಚಿತ್ರವಾಗಿ ವರ್ತಿಸಿದ ಘಟನೆಯು ಅಂಜರಕಂಡಿ ನಿವಾಸಿ ಜಯಪ್ರಕಾಶ್​ ಎಂದು ಗುರುತಿಸಲಾಗಿದೆ. ಆರೋಪಿ ಜಯಪ್ರಕಾಶ್​ನನ್ನು ಕಣ್ಣೂರು ನಗರ ಪೊಲೀಸರು ಬಂಧಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಚೋವ್ವಾ ರೈಲ್ವೆ ಕ್ರಾಸಿಂಗ್​​ ಬಳಿ ರೈಲು ಹಳಿಯ ಮಧ್ಯೆ ಕಾರು ಸಿಲುಕಿಕೊಂಡಿರೋದನ್ನು ಕಾಣಬಹುದಾಗಿದೆ. ಡ್ರೈವಿಂಗ್​ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯನ್ನು ಕ್ಯಾಮರಾ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ. ಬರೋಬ್ಬರಿ 15 ನಿಮಿಷಗಳ ಕಾಲ ಕಾರು ರೇಲ್ವೆ ಟ್ರ್ಯಾಕ್​ ಮೇಲೆಯೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರೈಲ್ವೆ ಹಳಿಗಳ ಮೇಲೆ ಕಾರು ಹತ್ತಿಸಿದ್ದ ಜಯಪ್ರಕಾಶ್​​ ಕುಡಿದ ಮತ್ತಿನಲ್ಲಿ ಗಿಯರ್​ ಬದಲಾಯಿಸಲು ಹರಸಾಹಸ ಪಡ್ತಿರೋದನ್ನು ಕಾಣಬಹುದಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ರೈಲ್ವೆ ಟ್ರ್ಯಾಕ್​ ಮೇಲೆ 15 ನಿಮಿಷಕ್ಕೂ ಅಧಿಕ ಕಾಲ ಜಯಪ್ರಕಾಶ್​ ರೈಲ್ವೆ ಹಳಿಯ ಮೇಲೆಯೇ ಇದ್ದರು ಎನ್ನಲಾಗಿದೆ. ರೈಲ್ವೆ ಕ್ರಾಸಿಂಗ್​​ನಲ್ಲಿದ್ದ ಸಿಬ್ಬಂದಿಯು ಜಯಪ್ರಕಾಶ್​​ ಕಾರನ್ನು ನೋಡುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ಮಾಹಿತಿ ನೀಡಿದ್ದಾರೆ. ಕೂಡಲೇ ಜಯಪ್ರಕಾಶ್​ರನ್ನು ಬಂಧಿಸಲಾಗಿದ್ದು ಸದ್ಯ ಜಯಪ್ರಕಾಶ್​ ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಎನ್ನಲಾಗಿದೆ.

https://twitter.com/i/status/1681967252827172865

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read