Viral Video | ಬಸ್ ಮತ್ತು ಟ್ರಕ್ ನಡುವೆ ಸಿಲುಕಿದ ಸ್ಕೂಟರ್; ಪವಾಡ ಸದೃಶ ರೀತಿಯಲ್ಲಿ ಪಾರಾದ ಸ್ಕೂಟರ್ ನಲ್ಲಿದ್ದ ವಿದ್ಯಾರ್ಥಿಗಳು

ಸ್ಕೂಟರ್ ನಲ್ಲಿ ಬರ್ತಿದ್ದ ಇಬ್ಬರು ವಿದ್ಯಾರ್ಥಿಗಳು ಶಾಲಾ ಬಸ್ ಮತ್ತು ಟ್ರಕ್ ನಡುವೆ ಸಿಲುಕಿಕೊಂಡು ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಬಸ್ಸಿನ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ ಇಬ್ಬರು ಸ್ಕೂಟರ್ ನಲ್ಲಿ ಶಾಲಾ ಬಸ್ಸಿನ ಹಿಂದೆ ಪ್ರಯಾಣಿಸುತ್ತಿರುವುದನ್ನು ತೋರಿಸುತ್ತದೆ.

ಈ ವೇಳೆ ವಿರುದ್ಧ ದಿಕ್ಕಿನಿಂದ ಟ್ರಕ್ ಬಂದಿದ್ದು ವಿದ್ಯಾರ್ಥಿಗಳಿಬ್ಬರು ವಾಹನ ಸಮೇತ ಬಸ್ ಮತ್ತು ಟ್ರಕ್ ನಡುವೆ ಸಿಲುಕಿಕೊಂಡರು. ಬಳಿಕ ಸ್ಕೂಟರ್ ಕೆಳಗೆ ಬೀಳುತ್ತಿದ್ದಂತೆ ನೆಲಕ್ಕುರುಳಿದರು. ಇಬ್ಬರೂ ಹೆಲ್ಮೆಟ್ ಧರಿಸಿದ್ದ ಕಾರಣ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ತಕ್ಷಣ ಎರಡೂ ವಾಹನಗಳು ನಿಲ್ಲಿಸಿ ಏನಾಯಿತೆಂದು ಗಮನಿಸಿರೋದು ವಿಡಿಯೋದಲ್ಲಿ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read