‘ಅಕ್ವೇರಿಯಂ’ ನಲ್ಲಿದ್ದ ಮೀನು ಸತ್ತಿದ್ದಕ್ಕೆ ಮನನೊಂದ ಬಾಲಕ ನೇಣಿಗೆ ಶರಣು

ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ಷುಲ್ಲಕ ಕಾರಣಕ್ಕೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಪ್ಪ – ಅಮ್ಮ ಒಂದು ಬುದ್ಧಿ ಮಾತು ಹೇಳಿದರೂ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಇನ್ನು ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವಿಗೆ ಶರಣಾಗುತ್ತಿದ್ದಾರೆ.

ಇಂಥಹುದೇ ಒಂದು ಪ್ರಕರಣದಲ್ಲಿ 13 ವರ್ಷದ ಬಾಲಕ ತನ್ನ ಮನೆಯ ಟೆರೇಸ್ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳದ ಮಲಪುರಂ ಜಿಲ್ಲೆಯ ಪೊನ್ನಾಯಿ ಚಂಗರಕುಲಂ ನಿವಾಸಿ ರೋಷನ್ ಎಂಬ ಬಾಲಕ ಸಾವನ್ನಪ್ಪಿದವನಾಗಿದ್ದು, ಪ್ರಾಣಿ ಪ್ರಿಯನಾಗಿದ್ದ ಈತ ತನ್ನ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಂಡಿದ್ದ.

ಇದರ ಜೊತೆಗೆ ಪಾರಿವಾಳಗಳನ್ನು ಸಾಕಿಕೊಂಡಿದ್ದು, ಇತ್ತೀಚೆಗೆ ಅಕ್ವೇರಿಯಂ ನಲ್ಲಿದ್ದ ಮೀನೊಂದು ಸತ್ತಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತ ಮನೆಯ ಟೆರೇಸ್ ಮೇಲೆ ನೇಣು ಬಿಗಿದುಕೊಂಡಿದ್ದಾನೆ. ಇದನ್ನು ನೋಡಿದ ಮನೆಯವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read