WATCH | ಮಾಡೆಲ್‌ ಮುಂದೆ ಯುವಕನಿಂದ ಹಸ್ತಮೈಥುನ; ಪ್ರಶ್ನೆ ಮಾಡುತ್ತಿದ್ದಂತೆ ಬಸ್‌ ಇಳಿದು ಎಸ್ಕೇಪ್

ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಅಶ್ಲೀಲತೆ ಮೆರೆದಿದ್ದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಸರ್ಕಾರಿ ಬಸ್‌ನಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮತ್ತು ಅನುಚಿತವಾಗಿ ವರ್ತಿಸಿದ ಘಟನೆ ನೆರೆಯ ರಾಜ್ಯ ಕೇರಳದಲ್ಲಿ ನಡೆದಿದೆ.

ಮೇ 17 ರಂದು ತ್ರಿಶೂರ್‌ನಿಂದ ಕೊಚ್ಚಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳಾ ಮಾಡೆಲ್ ಒಬ್ಬರು ಪ್ರಯಾಣಿಸಿದ್ದರು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಕಿರುಕುಳ ನೀಡಿ ತನ್ನ ಗುಪ್ತಾಂಗವನ್ನು ಬಹಿರಂಗಪಡಿಸಿದ ಬಗ್ಗೆ ದೂರು ನೀಡಿದ್ದರು.

ಬಸ್ ನಲ್ಲಿ ವ್ಯಕ್ತಿಯು ಹಸ್ತಮೈಥುನ ಮಾಡಿಕೊಂಡ ಬಗ್ಗೆ ಯುವತಿ ಬಹಿರಂಗವಾಗಿ ಧೈರ್ಯದಿಂದ ವಿರೋಧಿಸಿದ್ದಾಳೆ. ಜೋರಾಗಿ ಕೂಗಿಕೊಂಡ ಆಕೆ ಇತರೆ ಪ್ರಯಾಣಿಕರು ಹಾಗೂ ಕಂಡಕ್ಟರ್ ಗೆ ಕೇಳುವಂತೆ ಗಟ್ಟಿ ದನಿಯಲ್ಲಿ ವಿರೋಧಿಸಿದ್ದಾಳೆ. ಈ ರೀತಿ ಮಾಡುವುದನ್ನು ನಿಲ್ಲಿಸುವಂತೆ ಆತನಿಗೆ ಎಚ್ಚರಿಸಿದ್ದಾಳೆ.

ಕೂಡಲೇ ವ್ಯಕ್ತಿಯನ್ನು ಬಸ್ ನಿಂದ ಹೊರಗೆ ಎಳೆದು ತರಲಾಗಿದೆ. ಈ ವೇಳೆ ಆತ ಓಡಿ ಹೋಗಿದ್ದಾನೆ. ಆತನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ಕೋಝಿಕ್ಕೋಡ್ ಮೂಲದ ಸವದ್ ಶಾ (27) ಎಂದು ಗುರುತಿಸಲಾಗಿದೆ.

ಸಿನಿಮಾ ಶೂಟಿಂಗ್‌ಗಾಗಿ ಎರ್ನಾಕುಲಂಗೆ ತೆರಳುತ್ತಿದ್ದ ಮಾಡೆಲ್, ಘಟನೆಯನ್ನು ವಿವರಿಸುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read