ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಗೆ ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳ: ಅಟೆಂಡರ್ ಅರೆಸ್ಟ್

ಕೋಝಿಕ್ಕೋಡ್: ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 55 ವರ್ಷದ ಅಟೆಂಡರ್‌ ನನ್ನು ಕೋಝಿಕ್ಕೋಡ್ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಯನ್ನು ಶಸೀಂದ್ರನ್ ಎಂದು ಗುರುತಿಸಲಾಗಿದೆ. ದೂರಿನ ಪ್ರಕಾರ, ಮಹಿಳೆಯನ್ನು ಎರಡು ದಿನಗಳ ಹಿಂದೆ ಮುಖ್ಯ ಶಸ್ತ್ರಚಿಕಿತ್ಸೆ ಥಿಯೇಟರ್‌ನಿಂದ ಮಹಿಳಾ ಶಸ್ತ್ರಚಿಕಿತ್ಸಾ ಐಸಿಯುಗೆ ಸ್ಥಳಾಂತರಿಸಲಾಗಿದೆ.

ಆ ಸಮಯದಲ್ಲಿ ಮಹಿಳೆ ಅರೆಪ್ರಜ್ಞಾವಸ್ಥೆಯಲ್ಲಿದ್ದರು, ಆ ಸಮಯದಲ್ಲಿ, ಇನ್ನೊಬ್ಬ ರೋಗಿ ಗಂಭೀರ ಸ್ಥಿತಿಯಲ್ಲಿದ್ದರು ಮತ್ತು ಎಲ್ಲಾ ಸಿಬ್ಬಂದಿಗಳು ಆ ರೋಗಿಯನ್ನು ಗಮನಿಸಲು ತೆರಳಿದ್ದಾರೆ. ಮಹಿಳೆಯನ್ನು ಆಪರೇಷನ್ ಥಿಯೇಟರ್‌ನಿಂದ ಸರ್ಜಿಕಲ್ ಐಸಿಯುಗೆ ಈ ಅಟೆಂಡರ್ ಸ್ಥಳಾಂತರಿಸಿದ್ದು, ಕಿರಕುಳ ನೀಡಿದ್ದಾನೆ. ಆದರೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

ಸಂತ್ರಸ್ತ ಮಹಿಳೆ ಪ್ರಜ್ಞೆ ಬಂದ ಮೇಲೆ ತನ್ನ ಪತಿಗೆ ತಿಳಿಸಿದ್ದಾಳೆ. ಅವರು ವೈದ್ಯಕೀಯ ಕಾಲೇಜು ಪೊಲೀಸರಿಗೆ ದೂರು ನೀಡಿದ್ದಾರೆ. ಮೆಡಿಕಲ್ ಕಾಲೇಜು ಪೊಲೀಸರು ವ್ಯಕ್ತಿಯನ್ನು ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತನಿಖೆಗೆ ಆದೇಶಿಸಿದ್ದು, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ. ನಂತರ ಅಟೆಂಡರ್ ಅನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು. ಇಂದು ಮಧ್ಯಾಹ್ನದ ನಂತರ ವೈದ್ಯಕೀಯ ಕಾಲೇಜು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read