ಮೀನು ಕಚ್ಚಿದ್ದಕ್ಕೆ ಕೈಯೇ ಕಟ್ ; ಕೇರಳ ರೈತನಿಗೆ ಅಪರೂಪದ ಕಾಯಿಲೆ | Shocking

ಕೇರಳದ ಕಣ್ಣೂರಿನಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಮೀನು ಕಚ್ಚಿದ್ದಕ್ಕೆ ರೈತನೊಬ್ಬನ ಕೈನೇ ಕಟ್ ಮಾಡ್ಬೇಕಾಯ್ತು! ರಾಜೀಶ್ ಅನ್ನೋ ರೈತ ಕೊಳ ಸ್ವಚ್ಛ ಮಾಡ್ತಿದ್ದಾಗ ಮೀನು ಕಚ್ಚಿದೆ. ಸಣ್ಣ ಗಾಯ ಅಂತ ಸುಮ್ಮನಾಗಿದ್ದ, ಆಮೇಲೆ ಅದು ದೊಡ್ಡ ಕಾಯಿಲೆ ಆಯ್ತು.

ಮೊದಲು ಕೋಡಿಯೇರಿ ಆಸ್ಪತ್ರೆಗೆ ಹೋಗಿ ಟ್ರೀಟ್ಮೆಂಟ್ ತಗೊಂಡಿದ್ದ. ಆದ್ರೆ, ಕಾಯಿಲೆ ಜಾಸ್ತಿ ಆಯ್ತು. ಮಾಹೆಯ ಆಸ್ಪತ್ರೆಗೆ ಸೇರಿಸಿದ್ರು, ಅಲ್ಲಿಂದ ಕೋಝಿಕ್ಕೋಡ್‌ಗೆ ಕಳಿಸಿದ್ರು. ಅಲ್ಲಿ ಚೆಕ್ ಮಾಡಿದಾಗ ಗ್ಯಾಸ್ ಗ್ಯಾಂಗ್ರೀನ್ ಅನ್ನೋ ಅಪರೂಪದ ಕಾಯಿಲೆ ಅಂತ ಗೊತ್ತಾಯ್ತು.

ಈ ಕಾಯಿಲೆ ಬಂದ್ರೆ, ಅಂಗಾಂಶಗಳು ಬೇಗನೆ ಹಾಳಾಗ್ತವೆ. ರಾಜೀಶ್‌ನ ಬೆರಳಿನಿಂದ ಇಡೀ ಕೈಗೆ ಕಾಯಿಲೆ ಹರಡಿತ್ತು. ಮೆದುಳಿಗೆ ಹರಡೋ ಮುಂಚೆ ಕೈ ಕಟ್ ಮಾಡ್ಲೇಬೇಕು ಅಂತ ಡಾಕ್ಟರ್ಸ್ ಹೇಳಿದ್ರು. ಹಾಗಾಗಿ ಕೈ ಕಟ್ ಮಾಡ್ಬೇಕಾಯ್ತು.

ಈಗ ರಾಜೀಶ್ ಕೈ ಕಳೆದುಕೊಂಡಿದ್ದಾನೆ. ಆತನ ಜೀವನವೇ ಬದಲಾಗಿದೆ. ಆದ್ರೆ, ಈ ಕಾಯಿಲೆ ಬೇರೆಯವರಿಗೆ ಹರಡಲ್ಲ ಅಂತ ಡಾಕ್ಟರ್ಸ್ ಹೇಳಿದ್ದಾರೆ.

ಸಣ್ಣ ಗಾಯ ಅಂತ ಸುಮ್ಮನಾದ್ರೆ, ದೊಡ್ಡ ಕಾಯಿಲೆ ಆಗುತ್ತೆ ಅನ್ನೋದು ಇದರಿಂದ ಗೊತ್ತಾಗುತ್ತೆ. ಏನಾದ್ರೂ ಗಾಯ ಆದ್ರೆ, ತಕ್ಷಣ ಡಾಕ್ಟರ್ ಹತ್ರ ಹೋಗಿ ತೋರಿಸಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read