
ನವದೆಹಲಿ: ಕಳೆದ 11 ವರ್ಷಗಳಿಂದ ಉದ್ಯೋಗಿಯಾಗಿರುವ ಕೇರಳ ಮೂಲದ ವ್ಯಕ್ತಿಗೆ 45 ಕೋಟಿ ರೂಪಾಯಿ ಮೊತ್ತದ ಲಾಟರಿ ಬಹುಮಾನ ಬಂದಿದೆ.
39 ವರ್ಷದ ಶ್ರೀಜು ಬಹುಮಾನ ಪಡೆದ ಅದೃಷ್ಟವಂತ. ಮಹಜೂಜ್ ಸ್ಯಾರ್ಟ್ ಡೇ ಮಿಲಿಯನ್ಸ್ 154ನೇ ಡ್ರಾದಲ್ಲಿ ಶ್ರೀಜು ಅವರಿಗೆ ಬಹುಮಾನ ಬಂದಿದೆ. ದುಬೈನಿಂದ 120 ಕಿಲೋಮೀಟರ್ ದೂರದಲ್ಲಿರುವ ಫೂಜೈರಾದಲ್ಲಿ ಆಯಿಲ್ ಅಂಡ್ ಗ್ಯಾಸ್ ಕಂಪನಿಯಲ್ಲಿ ಕಂಟ್ರೋಲ್ ರೂಮ್ ಆಪರೇಟರ್ ಆಗಿ ಶ್ರೀಜು ಕೆಲಸ ಮಾಡುತ್ತಿದ್ದಾರೆ.
ಅವರಿಗೆ 6 ವರ್ಷದ ಅವಳಿ ಮಕ್ಕಳಿದ್ದಾರೆ. ಮೂರು ವರ್ಷಗಳಿಂದ ಅವರು ತಿಂಗಳಿಗೆ ಎರಡು ಬಾರಿ ಮಹಜೂಜ್ ಸ್ಯಾರ್ಟ್ ಡೇ ಮಿಲಿಯನ್ಸ್ ನಲ್ಲಿ ಲಾಟರಿ ಖರೀದಿಸುತ್ತಿದ್ದರು. ಊರಿನಲ್ಲಿ ಮನೆ ಕಟ್ಟಿಸುವ ಕನಸು ಹೊಂದಿರುವ ಅವರು ಲಾಟರಿಯಲ್ಲಿ ಬಂದ ಈ ಬೃಹತ್ ಮೊತ್ತವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.

 
		 
		 
		 
		 Loading ...
 Loading ... 
		 
		 
		